ಕೂಡಿಗೆ, ಜ. ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರದ ಐತಿಹಾಸಿಕ ಬಾವಿ ಕಟ್ಟೆಗೆ ಲಾರಿಯೊಂದು ಡಿಕ್ಕಿಪಡಿಸಿದ ಹಿನ್ನೆಲೆ ಹಾನಿಯಾಗಿದೆ.
ಗ್ರಾಮದಲ್ಲಿರುವ ಬಾವಿಯನ್ನು ಇದೀಗ ಮುಚ್ಚಲಾಗಿದ್ದು, ಅಳವಡಿಸಿರುವ ಕಟ್ಟೆ ಅಪಘಾತದಿಂದ ಹಾನಿಯಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮತ್ತು ಸದಸ್ಯ ಕೆ.ಬಿ. ಷಂಶುದ್ದೀನ್ ಕ್ರಮಕ್ಕೆ ಒತ್ತಾಯಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.