ಸೋಮವಾರಪೇಟೆ, ಜ. ೨೯: ತಾಲೂಕಿನ ಕಾಜೂರು ಗ್ರಾಮದ ಪುಷ್ಪ ಎಂಬುವವರ ವಾಸದ ಮನೆ ಆಕಸ್ಮಿಕ ಬೆಂಕಿಯಿAದಾಗಿ ಸಂಪೂರ್ಣ ನಾಶಗೊಂಡಿ ರುವ ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಬಡ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೂಲಿ ಕಾರ್ಮಿಕರಾಗಿರುವ ಪುಷ್ಪ ಅವರಿಗೆ ವೈಯುಕ್ತಿಕವಾಗಿ ೧೦ ಸಾವಿರ ನೆರವು ಒದಗಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ನೀಡುವುದಾಗಿ ಭರವಸೆಯಿತ್ತರು. ಈ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್, ಪ್ರಮುಖರಾದ ಸಬಿತಾ ಚನ್ನಕೇಶವ, ಹೊನ್ನಪ್ಪ ಸೇರಿದಂತೆ ಇತರರು ಇದ್ದರು.