ಮಡಿಕೇರಿ, ಜ. ೩೧: ಉತ್ತರಾಖಂಡ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನಂತರದಲ್ಲಿ ದೇಶದ ಎನ್.ಎಸ್.ಜಿ. (ರಾಷ್ಟಿçÃಯ ಭದ್ರತೆ) ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೊಡಗಿನವರಾದ ಮನೆಯಪಂಡ ಎ. ಗಣಪತಿ ಅವರು ಇದೀಗ ಜಿ.ಎಂ.ಆರ್. ವಿಮಾನ ನಿಲ್ದಾಣಗಳಲ್ಲಿನ ಭದ್ರತೆ ಮತ್ತು ವಿಜಿಲೆನ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಗಣಪತಿ ಅವರು ಮೂಲತಃ ಕುಂದ ಗ್ರಾಮದವರು.