ಸೋಮವಾರಪೇಟೆ, ಜ. ೩೦: ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದ ತಾಲೂಕಿನ ೩೫೫ ಫಲಾನುಭವಿಗಳ ಪೈಕಿ ಮೂರು ವರ್ಷಗಳ ನಂತರ ೪೪ ಮಂದಿಗೆ ಬಿ.ಪಿ.ಎಲ್. ಕಾರ್ಡ್ ವಿತರಣೆ ಮಾಡಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಡ್ಗಳನ್ನು ವಿತರಿಸಲಾಯಿತು.
೨೦೨೩ರಿಂದ ಒಟ್ಟು ೩೫೫ ಮಂದಿ ಅರ್ಜಿ ಸಲ್ಲಿಸಿದ್ದು, ೪೪ ಮಂದಿಯ ಅರ್ಜಿ ಅನುಮೋದನೆಗೊಂಡಿದ್ದರೆ, ೬೫ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ೨೪೬ ಅರ್ಜಿ ವಿಲೇವಾರಿಗೆ ಬಾಕಿ ಉಳಿದಿದೆ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ಮಾಹಿತಿ ನೀಡಿದರು.
ಸೋಮವಾರಪೇಟೆ ತಾಲೂಕಿನಲ್ಲಿ ೧.೨೦ ಲಕ್ಷ ಆದಾಯ ಮೀರಿದ, ೩ ಹೆಕ್ಟೇರ್ ಜಮೀನು ಹೊಂದಿರುವವರು, ತೆರಿಗೆ ಪಾವತಿದಾರರು, ಒಂದು ವರ್ಷದಿಂದ ಪಡಿತರ ಪಡೆಯದವರು ಸೇರಿದಂತೆ ಒಟ್ಟು ೧೦೩೨ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಎ.ಪಿ.ಎಲ್. ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ. ೧೪೫ ಮಂದಿ ನಾವು ಬಿ.ಪಿ.ಎಲ್.ಗೆ ಅ ರ್ಹರು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಬಸ್ ಸಂಚಾರ ಚರ್ಚೆ : ಬೆಂಗಳೂರಿನಿAದ ಶನಿವಾರಸಂತೆ ಅಥವಾ ಸೋಮವಾರಪೇಟೆಗೆ ಬರುವ ಸರ್ಕಾರಿ ಬಸ್ಸುಗಳು ಹಂಡ್ಲಿ ಗ್ರಾಮದಲ್ಲಿ ಕೋರಿಕೆ ನಿಲುಗಡೆ ಕೇಳಿದರೂ ನಿಲ್ಲುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಡಿಪೋ ವ್ಯವಸ್ಥಾಪರಿಗೆ ನಿರ್ಣಯ ಕಳುಹಿಸಿ ಆದೇಶ ಮಾಡಿಸಬೇಕೆಂದು ಸಮಿತಿ ಸದಸ್ಯ ವೀರೇಂದ್ರ ಆಗ್ರಹಿಸಿದರು. ಈ ವಿಚಾರಕ್ಕೆ ಸ್ಪಂದಿಸಿದ ಅಧ್ಯಕ್ಷರು, ನಿರ್ಣಯ ಕೈಗೊಂಡು ವ್ಯವಸ್ಥಾಪಕರಿಗೆ ಪತ್ರಬರೆಯಲು ಹಾಗೂ ಸೋಮವಾರಪೇಟೆ ಟಿ.ಸಿ. ಯವರೂ ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರು ಕೆ.ಎಸ್.ಆರ್.ಟಿ.ಸಿ. ಬಸ್ ಸಮಸ್ಯೆಗೆ ಸಂಬAಧಿಸಿದAತೆ ಮಾತನಾಡುತ್ತಿರುವ ಸಂದರ್ಭ, ಸೋಮವಾರಪೇಟೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಟಿ.ಸಿ. ಮೊಬೈಲ್ನಲ್ಲಿ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಅಧಿಕಾರಿ ಕ್ಷಮೆಯಾಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀದೇವಿ ಮಾತನಾಡಿ, ೨೦೨೫ರ ಸೆಪ್ಟೆಂಬರ್ ತಿಂಗಳ ಗೃಹಲಕ್ಷಿö್ಮ ಯೋಜನೆಯ ಹಣ ಬಿಡುಗಡೆಯಾಗಿದ್ದು ೬೮೨ ಫಲಾನುಭವಿಗಳಿಗೆ ಹಣ ಪಾವತಿಯಾಗಿದ್ದು, ೪೬ ಮಂದಿಗೆ ಹಣ ಬರಬೇಕಾಗಿದೆ ಎಂದರು. ಉಳಿದಂತೆ ಗೃಹಜ್ಯೋತಿ, ಯುವ ನಿಧಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸದಸ್ಯರಾದ ಎಸ್.ಎಂ. ಡಿಸಿಲ್ವಾ, ರಾಜಮ್ಮ, ರಾಜಪ್ಪ, ಬೋಜಪ್ಪ, ರಂಗಸ್ವಾಮಿ, ಗೌತಮ್ ಶಿವಪ್ಪ ಅವರುಗಳು ಉಪಸ್ಥಿತರಿದ್ದರು.