ಸೋಮವಾರಪೇಟೆ, ಜ. ೩೦: ಪಟ್ಟಣದಿಂದ ಶಾಂತಳ್ಳಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ರಸ್ತೆಯ ಮಧ್ಯಭಾಗದಲ್ಲಿ ಮಗುಚಿ ಬಿದ್ದ ಘಟನೆ ಇಂದು ನಸುಕಿನ ಜಾವ ಸಂಭವಿಸಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಜಕ್ಕನಳ್ಳಿ ಗ್ರಾಮದ ಪ್ರವೀಣ್ ಎಂಬವರು ಇಂದು ಬೆಳಿಗ್ಗೆ ಸಂಬAಧಿಕರನ್ನು ಸೋಮವಾರಪೇಟೆ ಬಸ್ ನಿಲ್ದಾಣಕ್ಕೆ ಕರೆತಂದು, ವಾಪಸ್ ಹೋಗುವ ಸಂದರ್ಭ ಕಂಬಳ್ಳಿ-ಜೇಡಿಗುAಡಿ ಮಧ್ಯೆಯ ತಿರುವಿನಲ್ಲಿ ಘಟನೆ ಸಂಭವಿಸಿದೆ.
ಎದುರು ಭಾಗದಿಂದ ಆಗಮಿಸುತ್ತಿದ್ದ ತಮಿಳುನಾಡು ರಾಜ್ಯದ ನೋಂದಣಿ ಸಂಖ್ಯೆಯಿರುವ ಕಾರು ರಸ್ತೆಯಲ್ಲಿ ‘ರಾಂಗ್ ಸೈಡ್’ ಬಂದಿದ್ದು, ಮುಖಾಮುಖಿ ಡಿಕ್ಕಿಯನ್ನು ತಪ್ಪಿಸಲು ಹೋದ ಪ್ರವೀಣ್ ಅವರು, ನಿಯಂತ್ರಣ ಕಳೆದುಕೊಂಡು ರಸ್ತೆ ಬಲ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿದ್ದಾರೆ.
ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು, ಕಾರಿನ ಮುಂಭಾಗ ತೀವ್ರ ಜಖಂಗೊAಡು ತಲೆಕೆಳಗಾಗಿ ಮಗುಚಿ ಬಿದ್ದಿದೆ.
ಅದೃಷ್ಟವಶಾತ್ ಚಾಲಕ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಂಗ್‌ಸೈಡ್‌ನಲ್ಲಿ ಆಗಮಿಸಿ ಅವಘಡಕ್ಕೆ ಕಾರಣವಾದ ತಮಿಳುನಾಡು ನೋಂದಣಿಯ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೇ ತೆರಳಿದ್ದಾನೆ.