ಸೋಮವಾರಪೇಟೆ, ಜ. ೩೦: ಸೋಮವಾರಪೇಟೆ-ಶಾಂತಳ್ಳಿ ಜಿಲ್ಲಾ ಮುಖ್ಯರಸ್ತೆಯ ಬಸವನಕಟ್ಟೆ ಬಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ತಾ.೩೧ ರಿಂದ (ಇಂದಿನಿAದ) ಆರಂಭಗೊಳ್ಳುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ನಗರಳ್ಳಿ ರಸ್ತೆ ಜಂಕ್ಷನ್ನಿAದ ಬಸವನಕಟ್ಟೆಯ ಗೌರಿಕೆರೆ ಜಂಕ್ಷನ್ವರೆಗಿನ ಆಯ್ದ ಭಾಗದಲ್ಲಿ ೨೮೫ ಮೀಟರ್ ರಸ್ತೆಯನ್ನು ೫.೫ ಮೀಟರ್ ಅಗಲದಲ್ಲಿ ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿ ಆರಂಭಗೊAಡಿರುವ ಹಿನ್ನೆಲೆ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ.
ಸೋಮವಾರಪೇಟೆಯಿಂದ ಶಾಂತಳ್ಳಿ ಭಾಗಕ್ಕೆ ತೆರಳುವ ವಾಹನಗಳು ಯಡೂರು ಮಾವಿನಕಟ್ಟೆ ಜಂಕ್ಷನ್ನಿAದ ಎಡಬದಿಯಲ್ಲಿರುವ ತಲ್ತರೆಶೆಟ್ಟಳ್ಳಿ, ಗೌರಿಕೆರೆ ಮಾರ್ಗವಾಗಿ ಶಾಂತಳ್ಳಿಗೆ ತೆರಳಬಹುದಾಗಿದೆ. ಕಾಂಕ್ರೀಟ್ ರಸ್ತೆಯಾಗಿರುವ ಕಾರಣ ಕ್ಯೂರಿಂಗ್ ಸಮಯವನ್ನೂ ಸೇರಿಸಿ ಮಾ.೬ ರವರೆಗೆ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ತಿಳಿಸಿದ್ದಾರೆ.