ನಾಪೋಕ್ಲು, ಜ. ೩೦: ಸ್ಥಳೀಯ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಾಲಾ ಸಂಘಗಳ ಸಮಾರೋಪ ಕಾರ್ಯಕ್ರಮ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಕ್ಕಳ ತಜ್ಞರಾದ ಡಾ. ಬಾದ್ಷಾ ಭಾಗವಹಿಸಿ ಮಾತನಾಡಿ, ಭವಿಷ್ಯದ ಗುರಿಯತ್ತ ಸಾಗುವ ದೃಢ ನಿರ್ಧಾರ ತೆಗೆದುಕೊಂಡು ಸತತ ಪ್ರಯತ್ನದಿಂದ ಯಶಸ್ಸಿನ ಕಡೆಗೆ ಸಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲರಾದ ನೀತಾ ಕೆ.ಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸತತ ಪ್ರಯತ್ನ ಇವುಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಕ್ರೀಡಾ ಸಾಧಕರಾದ ವಿದ್ಯಾರ್ಥಿಗಳಾದ ಅಮೃತ ಎಂ.ಹೆಚ್, ಮನ್ವಿತ್ ಪಿ.ಜೆ, ರಚಿತ ಪಿ.ಯು ಮತ್ತು ಜೋಶ್ವಾ.ಜೆ ಹಾಗೂ ಇತರ ಕ್ರೀಡಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಶಾ ಮತ್ತು ತಂಡದವರು ಪ್ರಾರ್ಥಿಸಿ ಹಿಂದಿ ಶಿಕ್ಷಕರಾದ ಕವಿತಾ ಸ್ವಾಗತಿಸಿದರು. ಸಮಾಜ, ಗಣಿತ ಶಿಕ್ಷಕರಾದ ಎಲ್ಸಿ, ವಿಜ್ಞಾನ ಶಿಕ್ಷಕ ಲಕ್ಷö್ಮಣ ಕಾರ್ಯಕ್ರಮವನ್ನು ನಿರೂಪಿಸಿ ಶಿಕ್ಷಕರಾದ ರೇಷ್ಮಾ ಶಾಲೆಯ ವಾರ್ಷಿಕ ವರದಿಯನ್ನು ಹಾಗೂ ಕನ್ನಡ ಶಿಕ್ಷಕಿ ರೂಪ ಮತ್ತು ಛಾಯಾ ಕ್ರೀಡಾಸಾಧಕರ ವರದಿಯನ್ನು ವಾಚಿಸಿದರ, ಸುಶ್ಮಿತಾ ವಂದಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಒಳಾಂಗಣ ಆಟದ ಸ್ಪರ್ಧೆ ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.