ಕುಶಾಲನಗರ, ಫೆ. ೧: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಕೆ .ಎಸ್. ರಾಜಶೇಖರ್ ವಹಿಸಿದ್ದರು. ಸಂಘದ ನಿರ್ದೇಶಕ ಶ್ರೀಹರ್ಷ ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿ ಶ್ರೀದೇವಿ ವೆಂಕಟರಮಣರಾವ್ ಲೆಕ್ಕಪತ್ರ ವರದಿ ಮಂಡಿಸಿದರು.

ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾಯರಿAದ ಸಂಘಕ್ಕೆ ದಾನವಾಗಿ ನೀಡಲ್ಪಟ್ಟ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ನಿರೂಪಕ, ನಿವೃತ್ತ ಕಲಾ ಶಿಕ್ಷಕ ಉ. ರಾ. ನಾಗೇಶ್ ಹಾಗೂ ಸಂಘದ ಮಾಜಿ ಅಧ್ಯಕ್ಷ ವಿಜಯೇಂದ್ರ ಮತ್ತು ಸಂಘದ ಕಾನೂನು ಸಲಹೆಗಾರ ಕೆ .ಎಸ್. ವೆಂಕಟರಮಣ ರಾವ್ ದಂಪತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಕೆ. ಸುಬ್ಬರಾಮು, ಕಾರ್ಯದರ್ಶಿ ಅನಿಲ್ ಕೆದಿಲಾಯ ನಿರ್ದೇಶಕರುಗಳು ಮತ್ತು ಮಾಜಿ ಅಧ್ಯಕ್ಷ ಬಿ.ಎಸ್. ರಾಧಾಕೃಷ್ಣ ಇದ್ದರು.