ಕೂಡಿಗೆ, ಫೆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲು ಬೆಟ್ಟ ಗ್ರಾಮದಲ್ಲಿರುವ ರೈತ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಎಂ. ಎಸ್. ಅಪ್ಪಾಜಿ ಅಧ್ಯಕ್ಷತೆಯಲ್ಲಿ ಉದ್ಭವ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ರೈತರು ಗ್ರಾಮದ ಅಭಿವೃದ್ಧಿ ಪೂರಕವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಮಲ್ಲೇನಹಳ್ಳಿ ಗ್ರಾಮದಲ್ಲಿ ಹಾರಂಗಿ ನದಿಯ ಸಮೀಪ ನಿರ್ಮಾಣಗೊಂಡಿರುವ ಏತ ನೀರಾವರಿ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬೇಸಾಯಕ್ಕೆ ಮತ್ತು ಬೇಸಿಗೆ ಕಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಅನುಕೂಲವಾಗುವಂತೆ ಯೋಜನೆಯ ಮುಖೇನ ಕಾಮಗಾರಿ ನಡೆದಿರುವ ಮಾದರಿಯಲ್ಲಿ ಕಕ್ಕೆಹೊಳೆ ನಾಲೆಯ ಕಾಲುವೆಗಳಿಗೆ ನೀರು ಹರಿಸುವಂತೆ ಸಂಬAಧಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯ ಮಾಡುವ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ಅನೇಕ ರೈತರು ತಮ್ಮ ಗ್ರಾಮದ ಉಪ ರಸ್ತೆಗಳ ದುರಸ್ತಿಗೆ ಸಂಬAಧಿಸಿದAತೆ ಕಾಮಗಾರಿ ಯನ್ನು ಕೈಗೊಳ್ಳುವಂತೆ ಒತ್ತಾಯ ಮಾಡಿದರು. ಈ ಸಂದರ್ಭ ಉಪಾಧ್ಯಕ್ಷ ಯೋಗಾನಂದ, ಕಾರ್ಯದರ್ಶಿ ಕುಶಾಲ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು, ಸಮಿತಿ ನಿರ್ದೇಶಕರು, ಸದಸ್ಯರು ಸೇರಿದಂತೆ ರೈತರು ಭಾಗವಹಿಸಿದ್ದರು.