ವೀರಾಜಪೇಟೆ, ಫೆ. ೧: ಭಾರತ ಪುಣ್ಯಭೂಮಿಯಾಗಿದ್ದು, ಇದನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದಕ್ಕಾಗಿ ಹಿಂದೂಗಳು ಒಂದಾಗಿರಬೇಕೆAದು ರಾಷ್ಟಿçÃಯ ಸ್ವಯಂ ಸೇವಕ ಸಂಘ ಸುಳ್ಯ ವಿಭಾಗದ ಕಾರ್ಯವಾಹ ಸುಭಾಷ್ ಚಂದ್ರ ಕಳಂಜೆ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಅರಮೇರಿ ಮಂಡಲ ವತಿಯಿಂದ ಅರಮೇರಿ ಕಳಂಚೇರಿ ಮಠದ ಶಾಲಾ ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಭವ್ಯ ಭಾರತದಲ್ಲಿ ಹಿಂದೂ ಧರ್ಮದ ಆಚರಣೆಯ ಮೇಲೆ ಆಕ್ರಮಣ ನಡೆದಿದೆ. ನಡೆಯುತ್ತಿದೆ. ಪ್ರಾರಂಭ ಮತ್ತು ಅಂತ್ಯ ಕಾಣದ ಸನಾತನ ಧರ್ಮವು ಇಂದಿಗೂ ಅಜರಾಮರವಾಗಿರುವುದರ ಹಿಂದೆ ದೊಡ್ಡ ಶಕ್ತಿ ಇದೆ ಎಂದ ಅವರು, ಕೊಡಗು ಜಿಲ್ಲೆಯ ಮಣ್ಣಿನ ಧೀಮಂತ ಸಂಸ್ಕೃತಿ ಉಳಿವಿಗಾಗಿ ಆಚರಣೆಗಳು ಹಬ್ಬ (ಮೊದಲ ಪುಟದಿಂದ) ಹರಿದಿನಗಳನ್ನು ಮರೆಯದೆ ಪಾಲಿಸುವಂತಾಗಬೇಕು. ಘರ್ಷಣೆಗಳನ್ನು ಉಂಟುಮಾಡುವ ಬಾಹ್ಯ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಹಿಂದೂ ಸಮಾಜ ಸೆಟೆದು ನಿಲ್ಲಬೇಕು, ಆಧುನಿಕತೆಯ ಹೆಸರಿನಲ್ಲಿ ಸಂಬAಧಗಳು ಮರೆಯಾಗುತ್ತಿವೆ. ಇದಕ್ಕೆ ಸಂಸ್ಕಾರ ಕೊರತೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.
ದಿವ್ಯಸಾನಿದ್ಯ ವಹಿಸಿ ಆರ್ಶಿವಚನ ನೀಡಿದ ಅರಮೇರಿ ಕಳಂಚೇರಿ ಮಠದ ಪೀಠಾಧೀಪತಿ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಂಘಟನಾತ್ಮಕ ಸಮಸ್ಯೆಗಳು ಎದುರಾದಲ್ಲಿ ಸಂಘಟನೆಯ ಶಕ್ತಿ ಜಾಗೃತವಾಗಬೇಕು. ಧರ್ಮ ಉಳಿವಿಗೆ ಎಲ್ಲರೂ ಕಟ್ಟಿಬದ್ಧರಾಗಬೇಕು. ಸಮಾಜ ಪರಿವರ್ತನೆಗೆ ಆಣಿಯಾಗಬೇಕು. ಧರ್ಮ ಚಿಂತನೆ, ರಾಷ್ಟç ಭಕ್ತಿ, ಜಾಗೃತ ಸಮಾಜ ಉದ್ದಾರಕ್ಕೆ ಸಮಾಜದ ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.
ಹಿಂದೂ ಸಂಗಮ ಅಯೋಜನಾ ಸಮಿತಿ ವೀರಾಜಪೇಟೆ ಸಂಚಾಲಕ ರಾಜೀವ್ ಕಾರ್ಯಪ್ಪ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಸೋಮೇಯಂಡ ಕೆ. ಪೂವಮ್ಮ, ಬಾಳೆಕುಟ್ಟೀರ ಮಂದಣ್ಣ ಮತ್ತು ಕಟ್ಟೇರ ಕಾವೇರಪ್ಪ ಉಪಸ್ಥಿತರಿದ್ದರು.
ಮಲ್ಲಂಮಟ್ಟಿ ಜಂಕ್ಷನ್‌ನಿAದ ಆರಂಭವಾದ ಶೋಭಾಯಾತ್ರೆಯು ಶ್ರೀ ಶಾಂತಮಲ್ಲಿಕಾರ್ಜುನ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಕೊನೆಯಾಯಿತು.