ನಾಪೋಕ್ಲು, ಫೆ. ೨೧: ಇಲ್ಲಿಗೆ ಸಮೀಪದ ಮೂರ್ನಾಡು ಗೌಡ ಸಮಾಜದಲ್ಲಿ ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೆಡ್ಡಸ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಮೂರ್ನಾಡು ಗೌಡ ಸಮಾಜದ ಆವರಣದಲ್ಲಿ ಆಯೋಜಿಸಿದ್ದ ಕೆಡ್ಡಸ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಮಹಿಳೆಯರು ಸೇರಿ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಿದರು.
ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು. ಈ ಹಬ್ಬವು ಕುಟುಂಬ ಒಗ್ಗಟ್ಟನ್ನು ಬಲಪಡಿಸುವುದರೊಂದಿಗೆ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಸಹಕಾರಿಯಾಗಿದೆ. ಯುವಪೀಳಿಗೆಗೆ ತಮ್ಮ ಸಂಪ್ರದಾಯಗಳ ಮಹತ್ವವನ್ನು ತಿಳಿಸುವ ಮಹತ್ವದ ಹಬ್ಬವಾಗಿ ಕೆಡ್ಡಸ ಆಚರಣೆ ಗಮನ ಸೆಳೆಯಿತು.
ಈ ಸಂದರ್ಭ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಲ್ಲುಮುಟ್ಲು ಜಶ್ಮಿ, ಉಪಾಧ್ಯಕ್ಷರಾದ ಬೈಲೋಳ್ಳಿ ಮೇನಕಾ, ಕಾರ್ಯದರ್ಶಿಯಾದ ತೆಕ್ಕಡೆ ಭವ್ಯ, ಖಜಾಂಚಿ ತೆಕ್ಕಡೆ ಆಶಾ, ಸದಸ್ಯರಾದ ಕಲ್ಲುಮುಟ್ಲು ಲತಾ, ಜಯಮಾಲ, ಉಳುವಾರನ ಕುಮುದಿನಿ, ಕುವೇಂದ್ರಾ, ಸುನಂದಿನಿ, ಚೆರಿಯಮನೆ ಸಾವಿತ್ರಿ, ಪಾಡಿಚೆಟ್ಟಿರ ಹರ್ಷಿತ, ಸುಷ್ಮಾ, ಕೃತಿಕಾ, ತೆಕ್ಕಡೆ ಪೂರ್ಣಿಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.