ಕಣಿವೆ, ಫೆ. ೨೨: ಇಲ್ಲಿನ ಮುಳ್ಳುಸೋಗೆ ಗ್ರಾಮದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ನೂತನ ದೇವತಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ದೇವಾಲಯ ದವರೆಗೆ ಪೂರ್ಣ ಕುಂಭ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು.

ನಂತರ ದೇವಾಲಯದಲ್ಲಿ ಶಕ್ತಿ ಗಣಪತಿ ಹೋಮ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ ನೆರವೇರಿತು. ನಂತರ ಮಧ್ಯಾಹ್ನ ವೃಷಭ ಲಗ್ನದಲ್ಲಿ ಜೀವ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕದೊಂದಿಗೆ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು.

ದೇವತಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮದ ಶಾಲಾ ಮೈದಾನದಲ್ಲಿ ಭಕ್ತಾದಿಗಳಿಗೆ ನಿರಂತರವಾಗಿ ಅನ್ನಪ್ರಸಾದ ಸೇವೆ ದೇವಾಲಯ ಸಮಿತಿ ವತಿಯಿಂದ ನಡೆಯಿತು.

ವೀರಾಜಪೇಟೆಯ ರಾಘವೇಂದ್ರ ಭಟ್, ರಾಮಚಂದ್ರ ಭಟ್, ಗೋಪಾಲಕೃಷ್ಣ ನಂಬೂದರಿ, ಶಂಕರಾದಿತ್ಯ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಎಂ.ಹೆಚ್. ಅಣ್ಣೇಗೌಡ, ಉಪಾಧ್ಯಕ್ಷ ಎಂ.ಆರ್. ನಂಜುAಡ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ದಾಸೇಗೌಡ, ನಿರ್ದೇಶಕರಾದ ಪಳನಿ ಸ್ವಾಮಿ, ಸಂತೋಷ್, ಎಂ.ಆರ್. ಮಹದೇವಪ್ಪ, ಎಂ.ಟಿ. ರಘು, ಎಂ.ಸಿ. ಸಂತೋಷ್, ಎಂ.ಬಿ. ಸುರೇಶ್ ಕುಮಾರ್, ಎಂ.ಎಸ್. ಪ್ರಸನ್ನ, ಎಂ.ಜಿ. ಅಜಿತ್ ಕುಮಾರ್ ಡಿ.ಟಿ. ರಂಗಸ್ವಾಮಿ ಇದ್ದರು.