ಮಡಿಕೇರಿ, ಫೆ. ೨೫: ಹೊದ್ದೂರು ಗ್ರಾಮದ ಪುರಾತನ ಇತಿಹಾಸ ಪ್ರಸಿದ್ಧ ದೇವತೆಗಳಾದ ಶ್ರೀ ವಿಷ್ಣುಮೂರ್ತಿ ಕ್ಷೇತ್ರ, ಶ್ರೀ ಭದ್ರಕಾಳಿ ಹಾಗೂ ಶ್ರೀ ಅತ್ತೋಳಮ್ಮ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವುದರ ಮೂಲಕ ಪುನರ್ ಪ್ರತಿಷ್ಠಾಪಿಸ ಲಾಯಿತು.
ಮಾಣಿಯಾಟ್ ಶ್ರೀ ಪುರುಷೋತ್ತಮನ್ ಕೆ. ಚಂದೇರ ಅವರ ಅಷ್ಠಮಂಗಲ ಪ್ರಶ್ನಾ ಚಿಂತನದAತೆ ಪ್ರಖ್ಯಾತ ವಾಸ್ತುಶಿಲ್ಪಿ ಕಾಸರಗೋಡು ಶ್ರೀ ಬೆದರಡಕ ರಮೇಶ್ ಕಾರಂತರ ವಾಸ್ತು ವಿನ್ಯಾಸದೊಂದಿಗೆ ನೂತನವಾಗಿ ಕ್ಷೇತ್ರದ ಜೀರ್ಣೋದ್ಧಾರಗೊಳಿಸಲಾಯಿತು.
ಬಳಿಕ ತಾ. ೧೭ ರಿಂದ ೨೦ ರವರೆಗೆ ವಿವಿಧ ಪೂಜಾ ಕಾರ್ಯಗಳೊಂದಿಗೆ ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿ ಅರವತ್ತ್ ಅವರ ನೇತೃತ್ವದಲ್ಲಿ ದೇವಸ್ಥಾನದ ತಕ್ಕಮುಖ್ಯಸ್ಥರ ಹಾಗೂ ಸಮಿತಿಯವರ ಉಪಸ್ಥಿತಿಯಲ್ಲಿ ಪುನರ್ ಪ್ರತಿಷ್ಠಾಪನೆ ಹಾಗೂ ವೈದಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮ ಹಾಗೂ ಹೊರ ನಾಡಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಷ್ಠಾಪಿಸಲ್ಪಟ್ಟ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಪ್ರತಿಷ್ಠಾಪನ ಸಂದರ್ಭ ಪ್ರತಿದಿನ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು. - ಸಾಬ