ಕೊಡ್ಲಿಪೇಟೆ, ಫೆ. ೨೬: ಕಳೆದ ರಾತ್ರಿ ಸುರಿದ ಮಳಿಗೆ ಸಮೀಪದ ದೊಡ್ಡಕೊಡ್ಲಿ ಗ್ರಾಮದ ನವಗ್ರಾಮದಲ್ಲಿ ಮರ ಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಮರ ಬಿದ್ದ ಹಿನ್ನೆಲೆ ಮನೆಗಳು ಜಖಂಗೊAಡಿದ್ದು, ಅದೃಷ್ಟವಶಾತ್ ಹೆಚ್ಚಿನ ದುರಂತ ಸಂಭವಿಸಿಲ್ಲ.
ಸುಗ್ಗಿ ಕಟ್ಟೆ ಸಮೀಪವಿದ್ದ ಅರಳಿ ಮರವು ಮಳೆಗೆ ಉರುಳಿದ್ದು, ಕೂಲಿ ಕಾರ್ಮಿಕರಾದ ಝಕೀರಾ ಬಾನು, ಜಮೀಲಾ ಅವರ ಮನೆಗೆ ಹಾನಿಯಾಗಿದೆ. ಅಕಾಲಿಕ ಮಳೆಯಿಂದಾಗಿ ಬಡ ಕೂಲಿ ಕಾರ್ಮಿಕರ ಮನೆಗೆ ಹಾನಿಯಾಗಿರುವ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರ ಗಮನಕ್ಕೆ ತರಲಾಗಿದ್ದು, ಶೀಘ್ರವಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ತಾಲೂಕು ಕೆಡಿಪಿ ಸದಸ್ಯ ಔರಂಗಜೇಬ್ ತಿಳಿಸಿದ್ದಾರೆ. ಮಳೆಗಾಲದಲ್ಲಿ ಅಪಾಯಕಾರಿಯಾದ ಮರಗಳನ್ನು ತೆರವುಗೊಳಿಸಲು ಸಂಬAಧಿಸಿದ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಔರಂಗಜೇಬ್ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕೊಡ್ಲಿಪೇಟೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಪ್ರಕೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.