ವೀರಾಜಪೇಟೆ, ಫೆ.೨೬: ಕಾದಂಬರಿಯ ಕ್ಷೇತ್ರದಲ್ಲಿ ಎಸ್.ಎಲ್ ಭೈರಪ್ಪ ಅವರ ಉತ್ತಮವಾದ ಅನುಭವವೇ ಒಂದು ಶಕ್ತಿಯಾಗಿತ್ತು ಎಂದು ಬಿಳುಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಡಾ. ಆರ್ ರವಿ ಭುಜವಳ್ಳಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ-೨೪೦ ಮಾಸಿಕ ತತ್ವಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ‘ಎಸ್.ಎಲ್ ಭೈರಪ್ಪ ಅವರ ಬದುಕು-ಬರಹ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಸ್.ಎಲ್ ಭೈರಪ್ಪ ಅವರು ಸಂಗೀತ ಮತ್ತು ಚಿತ್ರಕಲೆಯ ಕಲ್ಪನೆಯನ್ನು ಮುಂದಿಟ್ಟುಕೊAಡು ಪುಸ್ತಕವನ್ನು ರಚನೆ ಮಾಡಿದ್ದಾರೆ. ಭೈರಪ್ಪ ಅವರಿಂದ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ, ತಮ್ಮ ತಾಯಿಯ ಸಂವೇದನಶೀಲತೆಯಿAದ ಸಾಹಿತ್ಯ ಶಕ್ತಿಯು ಬಂದಿದ್ದು ಇವರ ಬಾಲ್ಯದ ಘಟನೆಗಳನ್ನು ವಸ್ತುನಿಷ್ಠವಾಗಿ ಕಾದಂಬರಿಗಳಲ್ಲಿ ತರಲಾಗಿದೆ. ಜೀವನ ಮೌಲ್ಯಗಳನ್ನು ಸಾಮಾನ್ಯ ಓದುಗನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾಡಿದೆ ಎಂದರು.
ಬರಹಗಾರರಾದ ಟಿ. ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ ಅವರು ಮಾತನಾಡಿ, ಜೀವನದಲ್ಲಿ ಹಲವು ಪಾಠಗಳನ್ನು ಕಲಿಸುವಂತ ಪುಸ್ತಕಗಳು ನಮ್ಮೊಂದಿಗೆ ಇದ್ದು ನಮ್ಮ ಸರಳತೆ, ನೆಮ್ಮದಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ವೃದ್ಧಿಸುವ ಮೂಲಕ ಸಾಧನೆಯ ಪಥದಲ್ಲಿ ನಡೆಸುತ್ತದೆ. ಉತ್ತಮ ಗ್ರಂಥಗಳು ನೈತಿಕ ಮೌಲ್ಯಗಳನ್ನು ತಿಳಿಸಿ ಉತ್ತಮ ವ್ಯಕ್ತಿತ್ವ ಹೊಂದಲು ಪುಸ್ತಕಗಳು ಸಹಾಯ ಮಾಡುವಂತದ್ದು, ಕವನಗಳು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತವೆ. ಯಾರಿಂದಲೂ ಕದಿಯಲಾಗದ ಮತ್ತು ಹಂಚಿದಷ್ಟು ಹೆಚ್ಚಾಗುವ ಆಸ್ತಿ ಎಂದರೆ ಜ್ಞಾನದ ಅರಿವು ಎಂದ ಅವರು. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪುಸ್ತಕಗಳು ಮೂಲೆ ಸೇರುತ್ತಿವೆ. ಯುವ ಪೀಳಿಗೆಗೆ ಪುಸ್ತಕಗಳ ಮಹತ್ವವನ್ನು ತಿಳಿಸಿಕೊಡುವಂತ ಕೆಲಸ ಆಗಬೇಕು ಎಂದರು.
ಉಳುವAಗಡ ಕಾವೇರಿ ಉದಯ ಅವರು ಬರೆದ ‘ಭಕ್ತಿ ಪಥದಲ್ಲಿ ಪಯಣ’ ಎಂಬ ಪುಸ್ತಕವನ್ನು ಡಾ. ಕಾಳಿಮಾಡ ಕೆ. ಶಿವಪ್ಪ ಅವರು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಾಹಿತಿ ಗಿರೀಶ್ ಕಿಗ್ಗಾಲು, ವೀರಾಜಪೇಟೆ ವೈದ್ಯರಾದ ಡಾ. ಎಸ್.ವಿ ನರಸಿಂಹನ್, ನಿವೃತ್ತ ಪ್ರಾಂಶುಪಾಲರಾದ ಪಟ್ಟಡ ಪೂವಣ್ಣ, ಮತ್ತಿತರರು ಉಪಸ್ಥಿತರಿದ್ದರು.