ವೀರಾಜಪೇಟೆ, ಫೆ. ೨೬: ವೀರಾಜಪೇಟೆ ತ್ರಿವೇಣಿ ಶಾಲೆಯಲ್ಲಿ “ಮಾದಕ ವಸ್ತು ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ” ನಡೆಯಿತು.
ವೀರಾಜಪೇಟೆ ನಗರ ಆರಕ್ಷಕ ಠಾಣೆಯ ಹಿರಿಯ ಸಿಬ್ಬಂದಿ ಹರೀಶ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದಿಂದ ತೀವ್ರತರವಾದ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪೋಷಕರು ಹಾಗೂ ಮಕ್ಕಳು ಈ ಬಗ್ಗೆ ಗಮನ ಹರಿಸಬೇಕು ಎಂದರು. ಮತ್ತೊಬ್ಬ ಸಿಬ್ಬಂದಿ ಮಂಜುನಾಥ್, ವೃತ್ತ ನಿರೀಕ್ಷಕ ಕೆ.ಕೆ ಕಾವೇರಪ್ಪ, ಕೊಡವ ಸಮಾಜ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಈ ಸಂದರ್ಭ ಹಾಜರಿದ್ದರು.
ವಿದ್ಯಾರ್ಥಿಗಳು “ವ್ಯಸನದಿಂದ ಮುಕ್ತರಾಗೋಣ” ಎಂಬ ಸಂದೇಶ ಸಾರುವ ಜಾಗೃತಿ ನಾಟಕ ನಡೆಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕೋಣೇರಿರ ಕಾವೇರಮ್ಮ, ಸಹ ಶಿಕ್ಷಕಿ ಕುಪ್ಪಣಮಾಡ ಪ್ರತಿಮ ಹಾಜರಿದ್ದರು. ಕೊಡವ ಸಮಾಜ ಉಪಾಧ್ಯಕ್ಷ ಕಾಣತಂಡ ಜಗದೀಶ್, ಶಾಲಾ ನಿರ್ದೇಶಕರುಗಳಾದ ಪಟ್ಟಡ ಮೋಹನ್, ಕಾಣತಂಡ ಧನು ವೇದಿಕೆಯಲ್ಲಿದ್ದರು.