ವೀರಾಜಪೇಟೆ, ಫೆ. ೨೬: ಜಿಲ್ಲೆಯ ಗಡಿ ಪ್ರದೇಶವಾದ ಕರಿಕೆಯಲ್ಲಿ ಡಿವೈಎಫ್‌ಐ ಸಂಘಟನೆಯ ನೂತನ ಘಟಕವನ್ನು ರಚಿಸಲಾಯಿತು.
ಡಿವೈಎಫ್‌ಐ ಕೊಡಗು ಜಿಲ್ಲಾ ಖಜಾಂಚಿ ಸಾದಿಕ್ ಎ.ಹೆಚ್. ನೇತೃತ್ವದಲ್ಲಿ ಘಟಕ ರಚನಾ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಸಂಘಟನೆಯ ಮುಖಂಡ ರಾಘವನ್ ವಹಿಸಿದ್ದರು. ಮುಖಂಡರಾದ ಸತ್ಯನಾಥನ್, ಕೇಶವನ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಶಂಸೀರ್ ಸೋಮವಾರಪೇಟೆ ಯುವ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಘಟಕದ ನೂತನ ಅಧ್ಯಕ್ಷರಾಗಿ ಹರೀಶ್, ಉಪಾಧ್ಯಕ್ಷರಾಗಿ ಮುಕೇಶ್, ಕಾರ್ಯದರ್ಶಿಯಾಗಿ ಕವನ್ ಕುಮಾರ್, ಸಹ ಕಾರ್ಯದರ್ಶಿಯಾಗಿ ನಿಖಿಲ್ ಕೆ.ಡಿ. ಮತ್ತು ಖಜಾಂಚಿಯಾಗಿ ವಿನೀಶ್ ಆಯ್ಕೆಯಾದರು.