ಮಡಿಕೇರಿ, ಫೆ. ೨೬: ಪ್ರಸಕ್ತ(೨೦೨೬-೨೭) ಸಾಲಿನಲ್ಲಿ ಡಾ. ಬಾಬು ಜಗಜೀವನ್ ರಾಂ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಪ.ಜಾತಿ/ಪ.ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ೨೦೨೬-೨೭ನೇ ಸಾಲಿನ ಡಾ. ಬಾಬು ಜಗಜೀವನ್ ರಾಂ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಸಂಬAಧ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯಲ್ಲಿ ಅರ್ಜಿದಾರರ ಹೆಸರು, ಲಿಂಗ, ವಯಸ್ಸು ಮತ್ತು ವಿದ್ಯಾರ್ಹತೆ, ಹುಟ್ಟಿದ ಸ್ಥಳ ಮತ್ತು ದಿನಾಂಕ, ರಾಷ್ಟಿçÃಯತೆ, ಅಂಚೆ ಮತ್ತು ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಜಾತಿ ಮತ್ತು ಉಪಜಾತಿ, ಉದ್ಯೋಗ ಮತ್ತು ಪದನಾಮ ಕಚೇರಿ ವಿಳಾಸ, ಸಾಧನೆಯ ಕ್ಷೇತ್ರ, ಈ ಹಿಂದೆ ಪಡೆದ ಪ್ರಶಸ್ತಿಗಳ ವಿವರ (ಸಂಕ್ಷಿಪ್ತ ಮಾಹಿತಿಗಳೊಂದಿಗೆ), ಪ.ಜಾತಿ/ಪ.ವರ್ಗದ ಜನಾಂಗದ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿದ ಬಗ್ಗೆ ೫ ಪ್ರಮುಖ ಅಂಶಗಳ ಮಾಹಿತಿಯನ್ನು ಅರ್ಜಿಗಳೊಂದಿಗೆ ನೀಡಬೇಕು.

ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ೦೮೨೭೨-೨೨೫೫೩೧, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ೦೮೨೭೨-೨೨೩೫೫೨, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ೦೮೨೭೬-೨೮೧೧೧೫, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ ೦೮೨೭೪-೨೪೯೪೭೬ ಅನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.