ಮಡಿಕೇರಿ, ಫೆ. ೨೬: ಅವಧಿ ಪೂರ್ಣಗೊಂಡ ಕುಶಾಲನಗರ ತಾಲೂಕಿನ ೧೬ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸಾರ್ವತ್ರಿಕ ಚುನಾವಣೆ ಮುಗಿದು ನೂತನ ಆಡಳಿತ ರಚನೆಯಾಗುವ ತನಕ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಹೆಬ್ಬಾಲೆ ಹಾಗೂ ಕೂಡಿಗೆ ಗ್ರಾ.ಪಂ.ಗಳಿಗೆ ಸಹಾಯಕ ಕಾರ್ಯಪಾಲ ಇಂಜಿನಿಯರ್, ಶಿರಂಗಾಲ ಹಾಗೂ ತೊರೆನೂರು ಗ್ರಾ.ಪಂ.ಗಳಿಗೆ ಡಯೆಟ್ ಕೂಡಿಗೆಯ ಅಭಿವೃದ್ಧಿ ವಿಭಾಗದ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರು, ನಾಕೂರು ಶಿರಂಗಾಲ ಹಾಗೂ ನಂಜರಾಯಪಟ್ಟಣಕ್ಕೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ೭ನೇ ಹೊಸಕೋಟೆ, ಕೊಡಗರಹಳ್ಳಿ ಗ್ರಾ.ಪಂ.ಗಳಿಗೆ ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಗ್ರಾ.ಪಂಗೆ ಕೂಡಿಗೆ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು, ಕಂಬಿಬಾಣೆ, ಕೆದಕಲ್ ಗ್ರಾ.ಪಂ.ಗೆ ಗುಣಭರವಸೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗುಡ್ಡೆಹೊಸೂರು, ಕೂಡುಮಂಗಳೂರು ಗ್ರಾ.ಪಂ.ಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಸುಂಟಿಕೊಪ್ಪ ಹಾಗೂ ನೆಲ್ಲಿಹುದಿಕೇರಿಗೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ನರೇಗ ವಿಭಾಗದ ಸಹಾಯಕ ನಿರ್ದೇಶಕರನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.