ಮಡಿಕೇರಿ, ಫೆ. ೨೬: ಚೆಟ್ಟಿಮಾನಿ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ತಾ. ೨೮ ರಂದು ಚೆಟ್ಟಿಮಾನಿಯಲ್ಲಿ ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಸಂಯೋಜಕ ವಿವೇಕ್ ಕೆದಂಬಾಡಿ, ಆರ್ಎಸ್ಎಸ್ಗೆ ೧೦೦ ವರ್ಷ ತುಂಬಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮದಲ್ಲಿ ಸಮಿತಿ ರಚನೆ ಮಾಡಿಕೊಂಡು ಆಯೋಜನೆ ಮಾಡಲಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪದಾಧಿಕಾರಿ ಶರತ್ ಪದಕಲ್ಲು ಮಾತನಾಡಿ, ತಾ. ೨೮ ರಂದು ಬೆಳಿಗ್ಗೆ ಪದಕಲ್ಲು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಲಶ, ಚಂಡೆ ಮೇಳದೊಂದಿಗೆ ಶೋಭಾಯಾತ್ರೆ ಹೊರಡಲಿದೆ. ಚೆಟ್ಟಿಮಾನಿ ಆಟದ ಮೈದಾನದವರೆಗೆ ತೆರಳಿದ ಬಳಿಕ ಅಲ್ಲಿ ೧೧.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಪದಕಲ್ಲು, ಕುಂದಚೇರಿ, ಕೋಪಟ್ಟಿ, ಚರಂಡೇಟಿ ಹಾಗೂ ಸಿಂಗತ್ತೂರು ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದು, ಮಹೇಶ್ ಕಡಗದಾಳು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ದಾಯನ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜೀವನ್ ಕೆದಂಬಾಡಿ, ಶಿವಕುಮಾರ್ ಕುದುಪಜೆ, ಶರತ್ ಶೆಟ್ಟಿ, ಸೋಮಪ್ಪ ಪೂಜಾರಿ ಇದ್ದರು.
ಶನಿವಾರಸಂತೆ: ಶನಿವಾರಸಂತೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ತಾ. ೨೮ ರಂದು ಸಂಜೆ ೪ ಗಂಟೆಗೆ ಹಿಂದೂ ಸಂಗಮ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತಿ ವಿದ್ಯಾಸಂಸ್ಥೆಯಿAದ ಆರಂಭವಾಗಿ ಮುಖ್ಯರಸ್ತೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ನಾಪೋಕ್ಲು: ಬಲ್ಲಮಾವಟಿ ವ್ಯಾಪ್ತಿಯ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ವಿರಾಟ್ ಹಿಂದೂ ಸಂಗಮವನ್ನು ತಾ. ೨೮ ರಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮಧ್ಯಾಹ್ನ ೨ ಗಂಟೆಗೆ ಬಲ್ಲಮಾವಟಿ ಮಂದ್ನಿAದ ಶೋಭಾಯಾತ್ರೆ ಆರಂಭವಾಗಲಿದ್ದು, ನೆಲಜಿ, ಪೇರೂರು, ದೊಡ್ಡಪುಲಿಕೋಟು, ಬಲ್ಲಮಾವಟಿ ಗ್ರಾಮದವರು ಪಾಲ್ಗೊಳ್ಳಲಿದ್ದಾರೆ. ನಂತರ ಗ್ರಾ.ಪಂ. ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
ನಾಪೋಕ್ಲು: ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ವಿರಾಟ್ ಹಿಂದೂ ಸಂಗಮವನ್ನು ತಾ. ೨೮ ರಂದು ೧೦.೩೦ ಗಂಟೆಗೆ ಚೆಯ್ಯಂಡಾಣೆಯ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಚೆಯ್ಯಂಡಾಣೆ - ಚೇಲಾವರ ಸಂಪರ್ಕಿಸುವ ಮುಖ್ಯ ರಸ್ತೆ ಬಳಿಯಿಂದ ಪ್ರಾರಂಭವಾಗಿ ಮಹಿಳಾ ಸಮಾಜದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಡಿಕೇರಿ: ಹೊದ್ದೂರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಮಾರ್ಚ್ ೧ ರಂದು ವಿರಾಟ್ ಹಿಂದೂ ಸಂಗಮ ನಡೆಯಲಿದೆ. ಅಂದು ಸಂಜೆ ೪ ಗಂಟೆಗೆ ಶ್ರೀ ಭಗವತಿ ದೇವಾಲಯದಿಂದ ಶೋಭಾಯಾತ್ರೆ ಪ್ರಾರಂಭಗೊAಡು ಮುಖ್ಯ ರಸ್ತೆಯ ಮೂಲಕ ಕಬಡಕೇರಿ ಆಟದ ಮೈದಾನದಲ್ಲಿ ಸಮಾಪನಗೊಳ್ಳಲಿದ್ದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಡಿಕೇರಿ: ಮಕ್ಕಂದೂರು ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ತಾ. ೨೭ ರಂದು (ಇಂದು) ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೦:೩೦ ಗಂಟೆಗೆ ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡಲಿದೆ. ಬಳಿಕ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ.