ಕಣಿವೆ, ಫೆ. ೨೬: ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ವ್ಯಸನಮುಕ್ತರಾಗಿ ಆರೋಗ್ಯದ ಕಡೆ ಹೆಚ್ಚು ನಿಗಾವಹಿಸುವ ಮೂಲಕ ಸದೃಢ, ಸಮರ್ಥ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕೆಂದು ಕೂಡಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ ಕರೆಕೊಟ್ಟರು.

ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಮದಲಾಪುರ ಗ್ರಾಮದಲ್ಲಿ ಯುವಕರಿಗಾಗಿ ‘ನನ್ನ ಭಾರತ - ಡಿಜಿಟಲ್ ಸಾಕ್ಷರತೆ’ ಎಂಬ ಧ್ಯೇಯಘೋಷದೊಂದಿಗೆ ಒಂದು ವಾರಗಳ ಕಾಲ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳ ಆರೋಗ್ಯ ಪರಿಶೀಲಿಸಿ ಮಾತನಾಡಿದ ಅವರು, ತಂತ್ರಜ್ಞಾನ ಹಾಗೂ ವಿಜ್ಞಾನದ ಈ ಯುಗದಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದ ಅರಿವು ಪಡೆಯುವ ಮೂಲಕ ಹೆಚ್ಚು ಜ್ಞಾನವಂತರಾಗಿ ಶಿಕ್ಷಣದ ಗುರಿ ಸಾಧಿಸಲು ಕರೆಕೊಟ್ಟರು. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಶಿಬಿರಾಧಿಕಾರಿಗಳಾದ ಕೆ.ಪಿ ವಿನಯ್, ಜಿ ಜಯಣ್ಣ, ಮದಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ. ರೇಣುಕಾ, ಆಶಾ ಕಾರ್ಯಕರ್ತೆ ಕವಿತಾ ಇದ್ದರು.