ಮಡಿಕೇರಿ, ಫೆ. ೨೬: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕÀ ಡಾ. ಮಂತರ್ ಗೌಡ ಅವರು ೧೫ ಲಕ್ಷ ರೂಗಳ ಅನುದಾನವನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಒದಗಿಸಿದ್ದು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದಿಂದ ಕಾಮಗಾರಿ ನಡೆಯಲಿದೆ.
ಸುಸಜ್ಜಿತ ಆಸನದ ವ್ಯವಸ್ಥೆ ಹಾಗೂ ಆಧುನಿಕ ಶೌಚಾಲಯ ಒಳಗೊಂಡ ಬಸ್ ನಿಲ್ದಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ತಿಳಿಸಿದ್ದಾರೆ.