ಗೋಣಿಕೊಪ್ಪಲು, ಫೆ. ೨೭: ದೇವನೆಲೆ ದೇವನೂರಿನಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂಪನ್ನಗೊAಡಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾದೇವರ ಪ್ರತಿಷ್ಠಾಪನೆ ಅತ್ಯಂತ ಸಂಭ್ರಮದಿAದ ಜರುಗಿತು. ೪ ದಿನಗಳ ಕಾಲ ನಡೆದ ದೇವರ ಕಾರ್ಯದಲ್ಲಿ ತಂತ್ರಿಗಳಾದ ಜ್ಯೋತಿಷಿ ವಿಶ್ವನಾಥ ಭಟ್ಟ ಕೊಳ್ಚಪ್ಪೆ ಹಾಗೂ ತಂಡದಿAದ ಅಷ್ಟಬಂಧ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಿತು.
ಬಾಳೆಲೆ, ದೇವನೂರು, ಸುಳುಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಪೊನ್ನಂಪೇಟೆ ತಾಲೂಕು ಬಾಳೆಲೆ ಹೋಬಳಿಯ ದೇವನೂರು ಗ್ರಾಮದ ೪೦೦ ವರ್ಷಗಳ ಇತಿಹಾಸ ಹೊಂದಿರುವ ದೇವನೆಲೆ ಎಂದೇ ಪ್ರಖ್ಯಾತಿ ಪಡೆದಿರುವ ದೇವನೂರಿನ ಇತಿಹಾಸ ಪ್ರಸಿದ್ಧ ಮಹಾದೇವರ ದೇವಸ್ಥಾನದ ಕಾರ್ಯವು ಕಳೆದ ೧ ವರ್ಷಗಳಿಂದ ಆರಂಭಗೊAಡಿತ್ತು. ಇದೀಗ ಊರಿನ ಭಕ್ತರ ಸಮ್ಮುಖದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ಮುಕ್ತಾಯಗೊಳ್ಳುವ ನೂತನ ಧರ್ಮ ಕೇಂದ್ರವಾಗಿ ಮಾರ್ಪಟ್ಟಿದೆ.
ದೇವಾಲಯ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡು ದೇವಾಲಯ ಅಭಿವೃದ್ಧಿಗಾಗಿ ಶ್ರಮಿಸುವ ಮೂಲಕ ದೇವಾಲಯದ ಲೋಕಾರ್ಪಣೆಗೆ ಮೂಲ ಕಾರಣಕರ್ತರಾದ ದೇವಾಲಯ ಆಡಳಿತ ಮಂಡಳಿಯ ನಿರ್ವಹಣಾ ಸಮಿತಿಯ ಆದೇಂಗಡ ವಾಸು ಬೆಳ್ಯಪ್ಪ ಅವರನ್ನು ದೇವಾಲಯ ಆಡಳಿತ ಮಂಡಳಿಯು ಭಕ್ತರ ಸಮ್ಮುಖದಲ್ಲಿ ಗೌರವಿಸಿ, ಸನ್ಮಾನಿಸಿದರು.
ಈ ವೇಳೆ ದೇವಾಲಯದ ಅಭಿವೃದ್ಧಿಗೆ ಸಹಕರಿಸಿದ ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ, ಬಾನಂಡ ಪ್ರಥ್ವಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರನ್ನು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ದೇವಾಲಯ ಸಮಿತಿಯ ಪ್ರಮುಖರಾದ ಆದೇಂಗಡ ವಿನು ಉತ್ತಪ್ಪ ಮಾತನಾಡಿ, ಸಾರ್ವಜನಿಕರ, ದಾನಿಗಳ ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು ರೂ. ೧.೩೦ ಕೋಟಿ ವೆಚ್ಚದಲ್ಲಿ ಮಹಾದೇವರ ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಿದೆ. ಮುಂದೆ ದೇವಾಲಯದ ಆವರಣದಲ್ಲಿ ಊಟದ ವ್ಯವಸ್ಥೆಗಾಗಿ ಸಭಾಂಗಣ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಭಕ್ತರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.ಪ್ರತಿನಿತ್ಯ ದೇವರ ಸೇವೆಯು ದೇವಾಲಯದಲ್ಲಿ ಲಭ್ಯವಿದ್ದು ಸುತ್ತಮುತ್ತಲಿನ ನಾಗರಿಕರು ಭಕ್ತರು, ನೂತನ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯ ಬಹುದಾಗಿದೆ ಎಂದು ದೇವಾಲಯ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ಆದೇಂಗಡ ವಾಸು ಬೆಳ್ಯಪ್ಪ ತಿಳಿಸಿದರು. ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಪ್ರಮುಖರುಗಳಾದ ಆದೇಂಗಡ ವಾಸು ಬೆಳ್ಯಪ್ಪ, ಆದೇಂಗಡ ವಿನು ಉತ್ತಪ್ಪ, ಆದೇಂಗಡ ದಿನೇಶ್, ಆದೇಂಗಡ ರಮೇಶ್ ಚಿಟ್ಯಪ್ಪ ಹಾಗೂ ಇತರೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
೪ ದಿನಗಳ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಪೋಡಮಾಡ, ಅಡ್ಡೇಂಗಡ, ಅರಮಣಮಾಡ, ಪಾರುವಂಗಡ ಹಾಗೂ ಆದೇಂಗಡ ಕುಟುಂಬಸ್ಥರು ನಿರ್ವಹಿಸಿದರು. ಬ್ರಹ್ಮ ಕಲಶೋತ್ಸವ ಮುಗಿಯುತ್ತಿದ್ದಂತೆಯೇ ಮಳೆಯು ಕಾಣಿಸಿಕೊಂಡು ನೆರೆದಿದ್ದ ಭಕ್ತರನ್ನು ಸಂತೃಪ್ತಿಗೊಳಿಸಿತು.
- ಹೆಚ್.ಕೆ. ಜಗದೀಶ್