ಮಕ್ಕಂದೂರಿನಲ್ಲಿ ವಿರಾಟ ಹಿಂದೂ ಸಂಗಮ
ಮಡಿಕೇರಿ,ಫೆ. ೨೭: ಹಿಂದುತ್ವಕ್ಕೂ ಭಾರತಕ್ಕೂ ಅವಿನಾಭಾವ ಸಂಬAಧವಿದೆ. ಭಾರತ ಹಾಗೂ ಹಿಂದುತ್ವ ಒಂದನ್ನೊAದು ಬಿಟ್ಟು ಇಲ್ಲ. ಹಿಂದುತ್ವ ಒಂದು ಜೀವನ ಪದ್ಧತಿ ಎಂದು ಮಂಗಳೂರಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಪ್ರಮುಖ್ ರೋಹಿತ್ ಅಭಿಮತ ವ್ಯಕ್ತಪಡಿಸಿದರು.
ಮಕ್ಕಂದೂರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿರಾಟ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಹಿಂದುತ್ವಕ್ಕೆ ವಿಶಾಲ ದೃಷ್ಟಿಕೋನವಿದೆ. ಆದರೆ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಕೆಲವು ಕಡೆಗಳಲ್ಲಿ ಹಿಂದುತ್ವವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಹಿಂದುತ್ವ ಒಂದು ಸ್ವಭಾವ ಎಂದು ಪ್ರತಿಪಾದಿಸಿದರು.
ನಗರ ಪ್ರದೇಶಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳಾಗಿವೆ. ಇದೀಗ ಗ್ರಾಮ ಮಟ್ಟದಲ್ಲಿ ಏರ್ಪಡಿಸಿರುವದು ಉತ್ತಮ ಕಾರ್ಯವಾಗಿದ್ದು, ಇದು ಮುನ್ನುಡಿಯಾಗಲಿ. ದುಷ್ಟ ಶಕ್ತಿಗಳಿಗೆ ಒಂದು ಪಾಠವಾಗಲಿ ಎಂದು ಹೇಳಿದರು.
ಭಾರತದಲ್ಲಿ ಇರುವಂತಹ ಸಂಸ್ಕೃತಿ, ಪದ್ಧತಿಗಳು ಬೇರೆ ಯಾವ ದೇಶದಲ್ಲೂ ಇಲ್ಲ, ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಕಾಲು ಹಿಡಿದು ಗುರು-ಹಿರಿಯರಿಗೆ ಗೌರವ ನೀಡುವ ಪದ್ಧತಿ ಇಂದಿಗೂ ಕಾಣಬಹುದಾಗಿದೆ. ಇಂತಹ ಸಂಸ್ಕೃತಿ, ಜ್ಞಾನದ ಭಂಡಾರವಾಗಿದ್ದ ಅಂದಿನ ನಳಂದ ಗುರುಕುಲಕ್ಕೆ ಆಕ್ರಮಣಕಾರರು ಬೆಂಕಿಯಿಟ್ಟರು. ಎಷ್ಟೋ ಬಾರಿ ಒಬ್ಬರಿಂದೊಬ್ಬರು ಭಾರತದ ಮೇಲೆ ಆಕ್ರಮಣ ಮಾಡಿದರೂ ಇಲ್ಲಿನ ಸಂಸ್ಕೃತಿ, ಪದ್ಧತಿ, ಜ್ಞಾನ ನಾಶವಾಗಲಿಲ್ಲ. ಭಾರತ ಶಾಂತಿ-ಸಹಬಾಳ್ವೆ ಬಯಸುವ ದೇಶ. ಎಂದಿಗೂ ಯಾರ ಮೇಲೆಯೂ ಆಕ್ರಮಣ ಮಾಡಿಲ್ಲ. ಆದರೆ, ಆಕ್ರಮಣ ಮಾಡಿದರೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂಬದನ್ನು ತೋರಿಸಿಕೊಟ್ಟಿದೆ ಎಂದು ವ್ಯಾಖ್ಯಾನಿಸಿದರು.
ಹಿಂದೂಗಳು ಶತ್ರುಗಳ ಬಗ್ಗೆ ಚಿಂತನೆ ಮಾಡುವದಕ್ಕಿಂತ ಒಳಶತ್ರುಗಳ ಬಗ್ಗೆ ಚಿಂತನೆ ಮಾಡಬೇಕಿದೆ. ಹಿಂದೆ ಪರಸ್ಪರ ಎದುರೆದುರೇ ಯುದ್ಧಗಳಾಗುತ್ತಿದ್ದವು. ಇಂದು ವಿಚಾರಗಳ ಬಗ್ಗೆ ವೈಚಾರಿಕ ಯುದ್ಧಗಳಾಗುತ್ತಿವೆ. ದೇವರಿಲ್ಲವೆಂದು ಹೇಳುವವರು ಅನೇಕರಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಆಕ್ರಮಣ, ಕೇರಳದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತನೆ ಮಾಡಬೇಕಿದೆ. ಮುಂದೆ ಕೊಡಗು ಜಿಲ್ಲೆಯಲ್ಲಿಯೂ ಅಂತಹ ಪರಿಸ್ಥಿತಿ ಬಾರದಂತೆ ಚಿಂತನೆ ಮಾಡಬೇಕೆಂದು ಹೇಳಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘ ಸಮಾಜದ ಕೆಲಸ ಮಾಡುವ ಸಲುವಾಗಿ ಆರಂಭಗೊAಡ ಸಂಘವಾಗಿದ್ದು, ಸಮಾಜದ ಮುಂದೆ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ದೃಷ್ಟಿಕೋನದ ಉದ್ದೇಶ ಹೊಂದಿರುವದಾಗಿ ಹೇಳಿದರು.
ಹಿಂದೂಗಳು ಒಂದಾಗಬೇಕು
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಆರ್ಎಸ್ಎಸ್ ೧೦೦ವರ್ಷ ಪೂರೈಸಿದ ಸಂಭ್ರಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೧೦೦ ವರ್ಷದ ಹಿಂದೆ ಹೆಡಗೆವಾರ್ ಅವರು, ಈ ದೇಶಕ್ಕೆ ಹಿಂದೂ ಸಂಘಟನೆಯ ಅವಶ್ಯಕತೆಯನ್ನು ಮನಗಂಡು ರಾಷ್ಟಿçÃಯ ಸ್ವಯಂ ಸೇವಕ ಸಂಘವನ್ನು ಆರಂಭ ಮಾಡಿದ್ದು, ಇದೀಗ ವಿಶ್ವದ ಅತ್ಯಂತ ದೊಡ್ಡ ಸಂಘವಾಗಿದೆ. ಹಿಂದೂ ಸಮಾಜ, ದೇಶ ರಕ್ಷಣೆ, ಸಮಾಜದ ಅಭಿವೃದ್ಧಿ, ಸಂಸ್ಖೃತಿ ಉಳಿವಿಗಾಗಿ ಉದಯಿಸಿದ ಸಂಘವಾಗಿದೆ. ನಮ್ಮಲ್ಲಿ ಶಕ್ತಿ ಪ್ರದರ್ಶನ ಅಥವಾ ಬೇರೆ ಯಾವದೇ ಉದ್ಧೇಶವಿಲ್ಲ. ವಿಶ್ವಕ್ಕೆ ಮಾದರಿಯಾಗಿರುವ ಪ್ರಾಚೀನ ಸಂಸ್ಕೃತಿಯನ್ನು ಉಳಿಸುವದಾಗಿದೆ. ಎಲ್ಲರೂ ಜಾತಿ, ಧರ್ಮ, ಮತ, ಪಕ್ಷ ಬಿಟ್ಟು ಎಲ್ಲರೂ ಹಿಂದೂ ಸಮಾಜವೆಂದು ಒಂದಾಗಬೇಕೆAದು ಹೇಳಿದರು.
ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿದರೂ ಧರ್ಮ ಅಳಿಯಲಿಲ್ಲ. ವಿಶ್ವಕ್ಕೇ ಹಿಂದೂ ಧರ್ಮ ಗುರುವಾಗಿದೆ. ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತವಾಗಿದ್ದು, ದೇಶ, ಸಂಸ್ಕೃತಿಗೆ ಧಕ್ಕೆ ಬಂದಾಗ ಎಲ್ಲರೂ ಒಂದಾಗಬೇಕೆAದು ಕರೆ ನೀಡಿದರು.
ಧರ್ಮ ರಕ್ಷಣೆ ನಮ್ಮ ಧರ್ಮ
ಅತಿಥಿಯಾಗಿದ್ದ ಮಾಜಿ ಯೋಧ, ಹಾಕಿ ಆಟಗಾರ ಚೌಕಿಮನೆ ರಘು ತಿಮ್ಮಯ್ಯ ಮಾತನಾಡಿ, ದೇಶ ರಕ್ಷಣೆಯೊಂದಿಗೆ ಧರ್ಮ ರಕ್ಷಣೆಯೂ ನಮ್ಮ ಧರ್ಮ; ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದೆಯೂ ಸಮಾಜದಲ್ಲಿ ಇದೇ ರೀತಿ ಒಗ್ಗೂಡಬೇಕೆಂದು ಕರೆ ನೀಡಿದರು.
ಲೋಕೋಪಯೋಗಿ ಇಲಾಖಾ ನಿವೃತ್ತ ಅಭಿಯಂತರ ಕುಂಬಗೌಡ
ನ ರವಿ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಮಕ್ಕಂದೂರು ಭಾಗದಲ್ಲಿ ಸೇತುವೆ, ರಸ್ತೆ ಸೇರಿದಂತೆ ಹಲವಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವದನ್ನು ನೆನಪಿಸಿಕೊಂಡರು.
ರಂಗು ತುಂಬಿದ ಶೋಭಾಯಾತ್ರೆ
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭದ್ರಕಾಳೇಶ್ವರಿ ದೇವಿಗೆ ಪೂಜೆ ಸಲ್ಲಿಸುವದರೊಂದಿಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ದೇವಾಲಯದಿಂದ ಮುಖ್ಯಬೀದಿಯಲ್ಲಿ ಸಾಗಿದ ಶೋಭಾಯಾತ್ರೆ ವಿಎಸ್ಎಸ್ಎನ್ ಸಭಾಂಗಣದಲ್ಲಿ ಸಮಾಪ್ತಿಗೊಂಡಿತು. ಶೋಭಾಯಾತ್ರೆಯಲ್ಲಿ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಗ್ರಾ.ಪಂ. ಸದಸ್ಯ ಕಟ್ಟೆಮನೆ ಗಣೇಶ್, ವಿಎಸ್ಎಸ್ಎನ್ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎ. ಹರೀಶ್, ಕಾರ್ಯಕ್ರಮ ಸಂಯೋಜಕ ಕುಂಬಗೌಡನ ಜಗದೀಪ್, ಹಿಂದೂ ಸಂಘಟನೆಗಳ ಪ್ರಮುಖರುಗಳಾದ ಚಂದ್ರ ಉಡೋತ್, ಕುಕ್ಕೇರ ಅಜಿತ್, ನಂದ (ಗಣೇಶ್), ತೂಟೇರ ಚಂದ್ರಶೇಖರ್, ತಂಬುಕುತ್ತೀರ ಮಧು ಮಂದಣ್ಣ, ಸುಧಾಕರ ಹೂವಲ್ಲಿ, ಬಿ.ಕೆ. ಜತ್ತಪ್ಪ, ಗಜಾನನ, ಏಕದಂತ, ವಿನಾಯಕ ಸೇವಾ ಸಮಿತಿ, ಶ್ರೀ ಮಹಾಗಣಪತಿ ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಶ್ರೀ ರಾಮ ಹಾಗೂ ಆಂಜನೇಯನ ಮೂರ್ತಿಗಳಿದ್ದ ಸ್ತಬ್ಧಚಿತ್ರ ಮಂಟಪಗಳು ಗಮನ ಸೆಳೆದವು. ಕಲಶ ಹೊತ್ತ ಮಹಿಳೆಯರು ಶೋಭಾಯಾತ್ರೆಯನ್ನು ಮುನ್ನಡೆಸಿದರು. ಶ್ರೀ ಭದ್ರಕಾಳೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಯೋಧರುಗಳಾದ ಪಡೇಟಿರ ಅಚ್ಚಯ್ಯ, ಬಿ.ಎಸ್. ವಿಜಯ, ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ರವಿ ಇದ್ದರು. ಶ್ರಮಾ ನೀಲ್, ಲೀಲಾವತಿ ಹಾಗೂ ಶ್ರುತಿ ಅವರುಗಳು ವಂದೇ ಮಾತರಂ ಗೀತೆ ಹಾಡಿದರು. ವಿಎಸ್ಎಸ್ಎನ್ ನಿರ್ದೇಶಕ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿದರೆ, ಗ್ರಾ.ಪಂ. ಅಧ್ಯಕ್ಷ ಬಿ.ಎನ್. ರಮೇಶ್ ನಿರೂಪಿಸಿ, ವಂದಿಸಿದರು.