ವೀರಾಜಪೇಟೆ, ಫೆ. ೨೭: ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಜರುಗಿತು.

ಬಿಟ್ಟಂಗಾಲದ ಬಿ. ಶೆಟ್ಟಿಗೇರಿ ಜಂಕ್ಷನ್‌ನಿAದ ಶೋಭಾಯಾತ್ರೆ ಪ್ರಾರಂಭಗೊAಡು ಆರ್.ಕೆ.ಎಫ್ ಸಭಾಂಗಣದವರೆಗೆ ಸಾಗಿತು. ಶೋಭಾಯಾತ್ರೆಯಲ್ಲಿ ಕೇಸರಿ ಶಲ್ಯ ಹಾಗೂ ಪೇಟ ಧರಿಸಿದ್ದ ಮಹಿಳೆಯರು ಪುರುಷರು ಸರತಿ ಸಾಲಿನಲ್ಲಿ, ಘೋಷಣೆಗಳನ್ನು ಕೂಗುತ್ತ ಸಾಗಿದರು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೇರಳದ ಚಂಡೆ ಮೇಳ, ತಮಟೆ ಸೇರಿದಂತೆ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಭಾರತಮಾತೆಯ ಭಾವಚಿತ್ರ ಹೊತ್ತಿರುವ ವಾಹನದೊಂದಿಗೆ ಮೆರವಣಿಗೆ ಆರ್.ಕೆ.ಎಫ್ ಸಭಾಂಗಣದವರೆಗೆ ಸಾಗಿತು.

ನಂತರ ಹಿಂದೂ ಸಂಗಮದ ಸಮಾವೇಶ ಜರುಗಿತು. ಈ ಸಂದರ್ಭ ಅತಿಥಿಗಳು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಸ್ವಯಂ ಸೇವಕ ಸಂಘದ ಪ್ರಮುಖ್ ಪಿ.ಎನ್. ವಿನೋದ್ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.. ಸ್ವಯಂ ಸೇವಕ ಸಂಘದಲ್ಲಿರುವ ಸೇವಕರು ರಾಷ್ಟç ಕಟ್ಟುವ ಕೆಲಸ ಮಾಡುತ್ತಿದ್ದಾರೆ. ರಾಷ್ಟçವನ್ನು ಉಳಿಸುವ ಸಲುವಾಗಿ ಹಿಂದೂತ್ವ ಬೇಕು. ಪ್ರತಿ ಮನೆಯಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಆಚಾರ ವಿಚಾರ, ಹಬ್ಬ ಹರಿದಿನಗಳ ಮಹತ್ವ ತಿಳಿಸಿಕೊಡುವಂತಾಗಬೇಕು. ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡುವ ಯುವಜನತೆಗೆ ಹಿರಿಯರು ಪ್ರೋತ್ಸಾಹ ನೀಡುವಂತಾಗಬೇಕು. ಕುಗ್ಗಿಸುವ ಕೆಲಸ ಮಾಡಬಾರದು. ಪೂರ್ವಜರಿಂದ ಉಳಿಸಿಕೊಂಡು ಬಂದಿರುವ ಸಂಸ್ಕೃತಿಯನ್ನು ಮನದಟ್ಟುಮಾಡಿಕೊಂಡು ಸಮಾಜದಲ್ಲಿ ಮಕ್ಕಳನ್ನು ಸತ್ಪçಜೆಗಳನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ಕಾಸರಗೋಡಿನ ಪ್ರಚಾರಕ್, ಸ್ವಯಂ ಸೇವಕ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ದಿಕ್ಸೂಚಿ ಬಾಷಣ ಮಾಡಿ ಸನಾತನ ಹಿಂದೂ ಧರ್ಮದ ನೀತಿ ನಿಯಮವನ್ನು ಪಾಲಿಸಬೇಕು.

ದೇಶಭಕ್ತರಾಗಬೇಕು ಹೊರತು ದೇಶ ಭ್ರಷ್ಟರಾಗಬಾರದು. ಹಿಂದೂ ಸಂಗಮ ಕಾರ್ಯಕ್ರಮ ಸಾಮರಸ್ಯ, ಕುಟುಂಬ ಪ್ರಬೋಧನೆ, ಸ್ವದೇಶಿಭಾವ, ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಯ ಮೂಲದ ಉದ್ದೇಶವಾಗಿದೆ ಎಂದರು.

ಸ್ವಯಂ ಸೇವಕ ಸಂಘದ ಹಿರಿಯರಾದ ನಾಣಮಂಡ ವೇಣು ಮಾಚಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಕುಪ್ಪಂಡ ಮನು ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಗಣೇಶ್ ಗೌಡ, ರೇಖಾ ಗಣೇಶ್, ಅಮ್ಮುಣಿಚಂಡ ರಂಜು ಸೇರಿದಂತೆ ಪ್ರಮುಖರು ಹಾಜರಿದ್ದರು. ಶೋಭಾಯಾತ್ರೆ ಸಂದರ್ಭ ತಂಪು ಪಾನೀಯ ವಿತರಿಸಲಾಯಿತು. ಬಳಿಕ ಮಧ್ಯಾಹ್ನ ನೆರೆದಿದ್ದವರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.