ವೀರಾಜಪೇಟೆ, ಫೆ. ೨೭: ಕಳೆದ ಐದು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಗೋಣಿಕೊಪ್ಪದ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿAದ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ ಮತ್ತು ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮದ ವಾಸಿಗಳಿಗೆ ಸಂಘದ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಈ ಸಂದರ್ಭ ಮಾತನಾಡಿದ ಟ್ರೂ ವಾರಿಯರ್ಸ್ ಸ್ವ ಸಹಾಯ ಸಂಘದ ಅಧ್ಯಕ್ಷ ಪ್ರಶಾಂತ್ (ವಿಜಯ್) ಅವರು ಮಾತನಾಡಿ, ನಮ್ಮ ಸಂಘದಲ್ಲಿ ಹದಿನಾಲ್ಕು ಸದಸ್ಯರಿದ್ದು ಕಳೆದ ಐದು ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಬಡ ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಆಸ್ಪತ್ರೆಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಾ ಬಂದಿದ್ದೇವೆ. ಇಲ್ಲಿನ ವೃದ್ಧಾಶ್ರಮಗಳಿಗೆ ನಾವೇ ಸ್ವತಃ ತಯಾರಿಸಿದ ಭೋಜನ ಮತ್ತು ಖಾದ್ಯವನ್ನು ತಂದು ಬಡಿಸಿ ಸಹ ಭೋಜನವನ್ನು ಸಹ ಮಾಡಿದ್ದೇವೆ. ಮುಂದೆಯು ಇನ್ನಷ್ಟು ದೊಡ್ಡಮಟ್ಟದಲ್ಲಿ ಸರ್ವ ಸದಸ್ಯರ ಬೆಂಬಲದೊAದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು. ಕಾರ್ಯದರ್ಶಿ ಓಂ ಪ್ರಕಾಶ್ ಮಾತನಾಡಿ, ಕಳೆದ ಐದು ವರ್ಷದಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಬರುತ್ತಿದ್ದೇವೆ. ಎಲ್ಲಾ ಸದಸ್ಯರ ಬೆಂಬಲದೊAದಿಗೆ ಮುಂದೆಯು ಇನ್ನಷ್ಟು ಹೆಚ್ಚಿನ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಅಚ್ಚು, ಮುಕೇಶ್, ನೆಲ್ಲಿರ ಸೋಮಣ್ಣ ಸಜೀ, ಸಬಾಸ್ಟಿನ್, ಸತ್ಯಜಿತ್, ನಿಶಾಂತ್, ಸೈಮನ್ ನಿಶಾಂತ್, ಅವಿನಾಶ್, ಸುನಿಲ್, ಪ್ರಜ್ವಲ್, ಇರ್ಫಾನ್, ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.