ಮಡಿಕೇರಿ, ಮಾ.೧: ತಾ. ೩ ರ ಮಂಗಳವಾರ ಚಂದ್ರÀನಿಗೆ ಕೇತು ಗ್ರಹಣ ಸಂಭವಿಸಲಿದೆ. ಅಂದು ಮಧ್ಯಾಹ್ನ ೩.೧೮ ಕ್ಕೆ ಗ್ರಹಣ ಸ್ಪರ್ಶಗೊಳ್ಳಲಿದೆ. ಸಂಜೆ ೪.೩೨ ಗಂಟೆಗೆÀ ಸಮ್ಮಿಲನವಾಗಲಿದೆ. ೫.೦೩ ಕ್ಕೆ ಗ್ರಹಣ ಮಧ್ಯಕಾಲ ಬರುತ್ತದೆ. ೫.೩೨ ಕ್ಕೆ ಉನ್ಮೀಲನವಾಗಲಿದೆ. ಸಂಜೆ ೬.೪೭ ಕ್ಕೆ ಗ್ರಹಣ ಮುಕ್ತಾಯಗೊಳ್ಳಲಿದೆ.

ಅಂದು ಚಂದ್ರೋದಯವಾಗುವುದೇ ಸಂಜೆ ೬.೨೨ ಆಗುವುದರಿಂದ ಭಾರತದಲ್ಲಿ ಕೊನೆ ಕ್ಷಣದಲ್ಲಿ ಅಂದರೆ ಕೇವಲ ೨೫ ನಿಮಿಷ ಮಾತ್ರ ಗ್ರಹಣ ವೀಕ್ಷಣೆಗೆ ಲಭ್ಯವಾಗುತ್ತದೆ. ಆದರೆ, ಆಗ ಪೂರ್ಣ ಚಂದ್ರಗ್ರಹಣ ಅಲಭ್ಯವಾಗುವುದರಿಂದ ಕೇವಲ ಭಾಗಶ: ಚಂದ್ರಗ್ರಹಣ ಮಾತ್ರ ವೀಕ್ಷಣೆಗೆ ಸಾಧ್ಯವಾಗುತ್ತದೆ.

ಪ್ರಸಕ್ತ ಚಂದ್ರಗ್ರಹಣವು ಹುಬ್ಬಾ ನಕ್ಷತ್ರ ಸಿಂಹ ರಾಶಿಯಲ್ಲಿ ಸಂಭವಿಸಲಿದೆ. ಮಖಾ, ಹುಬ್ಬಾ, ಉತ್ತರಾ, ಭರಣಿ, ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು ಹಾಗೂ ಸಿಂಹ, ಕನ್ಯಾ, ಮಕರ, ಮೀನ ರಾಶಿಯವರು ಗ್ರಹಣದ ಮರುದಿನ ಮನೆಯಲ್ಲಿ ಅಥವ ದೇವಾಲಯಗಳಲ್ಲಿ ಪ್ರಾರ್ಥನೆ, ಪೂಜೆ ನಡೆಸಿದರೆ ಒಳಿತು. ಗ್ರಹಣದ ದಿನವಾದ ಮಂಗಳವಾರ ಮ. ೧೨ ಗಂಟೆಗೂ ಮುನ್ನ ಆಹಾರ ಸೇವಿಸಿದರೆ ಒಳಿತು. ಆ ನಂತರ ಸಂಜೆ ೬.೪೭ ರ ಬಳಿಕ ಸ್ನಾನ ಮಾಡಿ ಆಹಾರ ಸೇವಿಸಿದರೆ ಒಳಿತು. ಗ್ರಹಣ ಕಾಲದಲ್ಲಿ ಧ್ಯಾನ ಮಾಡುವುದು ಕ್ಷೇಮ. ಗ್ರಹಣ ಸ್ಪರ್ಶ ಕಾಲ ಸಿದ್ಧಪಡಿಸಿದ ಆಹಾರ ಇತ್ಯಾದಿಯಿದ್ದರೆ, ಅದರ ಮೇಲೆ ಗರಿಕೆ, ತುಳಸಿ ಇರಿಸಿದರೆ ಸೂಕ್ತ.

ಚಂದ್ರಗ್ರಹಣ ಹಿನ್ನೆಲೆ ಮಾ. ೩ ರಂದು ಬಹುತೇಕ ದೇವಾಲಯಗಳು ಬೆಳಿಗ್ಗೆ ಪೂಜೆ ಬಳಿಕ ಮುಚ್ಚಲ್ಪಡುತ್ತವೆ. ಸಂಜೆ, ೭ ರ ಬಳಿಕ ತೆರೆÀಯಲ್ಪಡುತ್ತವೆ. ಇನ್ನು ಕೆಲವು ದೇವಾಲಯಗಳು ಮಧ್ಯಾಹ್ನ ಬಳಿಕ ಮುಚ್ಚಲ್ಪಡುತ್ತವೆ. -“ಚಕ್ರವರ್ತಿ”