ಮಡಿಕೇರಿ, ಮಾ. ೧: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿ ಹಾಗೂ ಎಂಎಸ್‌ಎAಇ ಡೆವಲಪ್ಮೆಂಟ್ ಅಂಡ್ ಪೆಸಿಲಿಟೇಷನ್ ಆಫೀಸ್ ಮಂಗಳೂರು ಇವರ ಸಹಯೋಗದೊಂದಿಗೆ ಉದ್ಯಮ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಎಂಎಸ್‌ಎAಇ ಅಸಿಸ್ಟೆಂಟ್ ಡೈರೆಕ್ಟರ್ ಸುಮನ್ ಎಸ್. ರಾಜು ಉದ್ಘಾಟಿಸಿದರು. ಉದ್ಯಮಗಳನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅನಿಷತ್ ಉಪನ್ಯಾಸಕರು ಆಡ್ರಾಯಿಡ್ ಕಾಲೇಜು ಸಿದ್ದಾಪುರ ಇವರು ಉದ್ಯಮತೆಯ ಕುರಿತು ಚಟುವಟಿಕೆಗಳನ್ನು ನೀಡುವುದನ್ನು ತಿಳಿಸಿಕೊಟ್ಟರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿರ್ಮಲ ಹೆಚ್.ಪಿ. ಅಧ್ಯಕ್ಷತೆ ವಹಿಸಿ, ಯುವ ಜನಾಂಗ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.

ಅತಿಥಿಗಳಾಗಿ ಫ್ಯೂಚರ್ ಪಾಯಿಂಟ್ ಮುಖ್ಯಸ್ಥೆ ಸುನಿತಾ ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಸ್ವತಿ ಮತ್ತು ತಂಡದವರು ಪ್ರಾರ್ಥಿಸಿದರು.

ಕಾಲೇಜಿನ ವಾಣಿಜ್ಯಶಾಸ್ತç ಮುಖ್ಯಸ್ಥ ಡಾ. ವೇಣುಗೋಪಾಲ್ ಹೆಚ್.ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.