ಗೋಣಿಕೊಪ್ಪಲು, ಮಾ. ೫: ಕೊಡಗು ಗೌಡ ಹಿತರಕ್ಷಣಾ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾಗಿ ಪರ್ಮಾಲೆ ಗಣೇಶ್ ಉಪಾಧ್ಯಕ್ಷರಾಗಿ ದಂಬೆಕೋಡಿ ಕವನ ಭೀಷ್ಮ, ಪದ್ದಂಭೈಲು ರವಿಕುಮಾರ್, ಗೌರವಾಧ್ಯಕ್ಷರಾಗಿ ಪಿ.ಎಲ್. ಸುರೇಶ್ ಅವರನ್ನು ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪೂಜಾರಿರ ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ಬಂಗಾರಕೋಡಿ ತುಳಸಿ, ಗಾಂಧಿ ಪ್ರಸಾದ್, ಖಜಾಂಚಿಯಾಗಿ ಪಟ್ಟಡ ದೀಪಕ್, ನಿರ್ದೇಶಕರುಗಳಾಗಿ ಬಾಳಾಡಿ ಪ್ರತಾಪ್, ಅಚ್ಚಂಡಿರ ಸೌಮ್ಯ ರಾಕೇಶ್, ಉಳುವಾರು ಪುಲೋತಾಕ್ಷಿ, ಕೂಸಪ್ಪ ಅಜ್ಜಿಮನೆ ಮಂಜುನಾಥ್, ಕಾಂಚನ ಗೌಡ ಮತ್ತು ಮೋಹಿನಿ ಅವರನ್ನು ನೇಮಕ ಮಾಡಲಾಗಿದೆ.