ಮಡಿಕೇರಿ, ಮಾ. ೫: ಆಟೋ ಒಂದರಲ್ಲಿ ಬಾಡಿಗೆಗೆ ಎಂದು ತೆರಳಿ, ಬಾಡಿಗೆ ಹಣವನ್ನು ಪೂರ್ತಿ ಪಾವತಿಸದೆ ಆಟೋ ಚಾಲಕನನ್ನೇ ಬೆದರಿಸಿದ ಘಟನೆಗೆ ಸಂಬAಧಿಸಿದAತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯಿಂದ ಗಾಳಿಬೀಡಿಗೆ ದಿನೇಶ್ ಶೆಟ್ಟಿ ಎಂಬವರ ಆಟೋದಲ್ಲಿ ಅಸ್ಸಾಂ ಮೂಲದ ಬಪ್ಪಾಮಿಯ ಹಾಗೂ ರಾಕಿ ಆಲಂ ಎಂಬವರುಗಳು ಬಾಡಿಗೆಗೆ ತೆರಳಿದ್ದು, ಅಲ್ಲಿಗೆ ತಲುಪಿದ ಬಳಿಕ ಬಾಡಿಗೆ ಹಣವನ್ನು ಪೂರ್ತಿಯಾಗಿ ಪಾವತಿಸಲು ಹಿಂದೇಟು ಹಾಕಿದ್ದಾರೆ. ಇದನ್ನು ಚಾಲಕ ದಿನೇಶ್ ಶೆಟ್ಟಿ ಪ್ರಶ್ನಿಸಿದ ಸಂದರ್ಭ ಬಪ್ಪಮಿಯ ಹಾಗೂ ರಾಕಿ ಆಲಂ, ಕೃಷ್ಣ, ಸುಶಾಂತ್ ಎಂಬವರುಗಳು ಅವರನ್ನು ಅಡ್ಡಗಟ್ಟಿ ಬೆದರಿಸಿದ್ದಾರೆ. ಈ ಸಂಬAಧ ದೂರು ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.