ಮೂರ್ನಾಡು, ಮಾ.೫: ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಕ್ತದ ಒತ್ತಡ ಮತ್ತು ಸಕ್ಕರೆಯ ಅಂಶಗಳ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಮೂರ್ನಾಡು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ವಿದ್ಯಾ, ಮತ್ತಿತರರು ಆಗಮಿಸಿ ಕಾರ್ಯಕ್ರÀಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಗ್ರಾಮದ ಎಲ್ಲ ಕೇರಿಗಳಿಂದಲೂ ಉತ್ತಮ ಸಂಖ್ಯೆಯಲ್ಲಿ ಕಿಗ್ಗಾಲು ಗ್ರಾಮಸ್ಥರು ಶಿಬಿರಕ್ಕೆ ಆಗಮಿಸಿ ರಕ್ತದ ಒತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಮತ್ತು ದೇಹದ ತೂಕವನ್ನು ತಪಾಸಣೆಗೊಳಪಡಿಸಿಕೊಂಡು ಶಿಬಿರದ ಲಾಭವನ್ನು ಪಡೆದುಕೊಂಡರು.