ಸೋಮವಾರಪೇಟೆ, ಮಾ. ೮: ಇಲ್ಲಿನ ಪಿ.ಎಂ.ಶ್ರೀ. ಸರ್ಕಾರಿ ಶಾಲೆಗೆ ೧೯೯೧-೯೩ರ ಸಾಲಿನ ಹಳೆ ವಿದ್ಯಾರ್ಥಿಗಳ ಜಿಜೆಸಿ ಸ್ನೇಹಿತರ ಬಳಗದ ವತಿಯಿಂದ ೪ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಯಿತು.
ಕಳೆದ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಶಾಲಾ ಆವರಣದಲ್ಲಿ ಅನುಚಿತ ಕೃತ್ಯಗಳನ್ನು ನಡೆಸಿದ್ದರು. ಭದ್ರತೆಯ ದೃಷ್ಟಿಯಿಂದ ಸಿ.ಸಿ. ಕ್ಯಾಮರಾದ ಅವಶ್ಯಕತೆ ಇರುವುದನ್ನು ಮನಗಂಡ ಹಳೆ ವಿದ್ಯಾರ್ಥಿಗಳು, ಶಾಲೆಗೆ ೪ ಸಿ.ಸಿ. ಕ್ಯಾಮರಾಗಳನ್ನು ಕೊಡುಗೆಯಾಗಿ ನೀಡಿದರು. ಇದರೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಮಫಲಕ ಅಳಿಸಿ ಹೋಗಿದ್ದ ಹಿನ್ನೆಲೆ ಇದೇ ಬಳಗದಿಂದ ಅಕ್ರಾಲಿಕ್ ಫಲಕ ಅಳವಡಿಸಲಾಯಿತು. ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ, ಪಿ.ಎಂ.ಶ್ರೀ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದಿನೇಶ್, ಮುಖ್ಯೋಪಾಧ್ಯಾಯಿನಿ ಯಶೋಧಾ ಹಾಗೂ ಶಿಕ್ಷಕರು, ಸ್ನೇಹಿತರ ಬಳಗದ ಪದಾಧಿಕಾರಿಗಳು ಇದ್ದರು.