ಚೆಯ್ಯಂಡಾಣೆ, ಮಾ.೯: ವೀರಾಜಪೇಟೆಯ ಪತ್ರಕರ್ತರ ವೇದಿಕೆಯ ನೂತನ ಕಚೇರಿಯನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ. ಅದು ನಿಜಕ್ಕೂ ಶ್ಲಾಘನೀಯ, ನಾನು ೪೫ ವರ್ಷದಿಂದ ಪತ್ರಕರ್ತರೊಡನೆ ಒಡನಾಟ ಇಟ್ಟುಕೊಂಡಿದ್ದೇನೆ, ಪತ್ರಕರ್ತರ ಜೀವನ ತುಂಬಾ ಕಷ್ಟಕರವಾಗಿದೆ. ಪತ್ರಕರ್ತರು ಆರ್ಥಿಕವಾಗಿ ಹಿನ್ನೆಡೆಯಲ್ಲಿದ್ದಾರೆ, ಟೀಕೆಗಳನ್ನು ಮೆಟ್ಟಿ ನಿಲ್ಲುವವರು ಪತ್ರಕರ್ತರು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು.

ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮುರಳಿಧರ್ ಮಾತನಾಡಿ, ಈ ಭಾಗದ ಪತ್ರಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ ವೀರಾಜಪೇಟೆಯಲ್ಲಿ ಪತ್ರಿಕಾ ಭವನ ಸ್ಥಾಪನೆಯಾಗಲಿ ಎಂದರು.

ಈ ಸಂದರ್ಭ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಮತಿನ್ ಮಾತನಾಡಿದರು. ಇದೆ ಸಂದರ್ಭ ಅತಿಥಿಗಳು ಪತ್ರಕರ್ತರ ವೇದಿಕೆಯ ಲೋಗೋ ಬಿಡುಗಡೆ ಗೊಳಿಸಿದರು. ಪತ್ರಕರ್ತರ ವೇದಿಕೆಯ ವತಿಯಿಂದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಪುರಸಭಾ ಮಾಜಿ ಸದಸ್ಯರಾದ ಮೊಹಮ್ಮದ್ ರಾಫಿ, ಸುನೀತಾ ಜೂನ, ಅತಿಪ್ ಮನ್ನಾ, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ, ತಹಶೀಲ್ದಾರ್ ನಾಚಪ್ಪ, ಜೆಡಿಎಸ್‌ನ ಪ್ರಮುಖರಾದ ಮಂಜುನಾಥ್, ಸುಭಾಷ್ ನಾಣಯ್ಯ, ಸುಮೇಶ್, ಡಾ.ಸಮೀರ್ ಮತ್ತಿತರರು ಪಾಲ್ಗೊಂಡಿದ್ದರು.

ಪತ್ರಕರ್ತರ ವೇದಿಕೆಯ ಅಧ್ಯಕ್ಷ ಪಿ.ಕೆ ಅಬ್ದುಲ್ ರೆಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ ವೇದಿಕೆಯ ಕೋಶಾಧಿಕಾರಿ ಶಶಿ ಅಚ್ಚಪ್ಪ, ರಾಜೇಶ್ ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಮ್, ಸುನಿಲ್ ಕುಮಾರ್, ಅಶ್ರಫ್, ಫೈಸಲ್, ಮತ್ತಿತರರು ಇದ್ದರು. ಎ.ಎಂ ಮಂಜುನಾಥ್ ಸ್ವಾಗತಿಸಿ ಸರ್ವರನ್ನು ವಂದಿಸಿದರು.