ಶ್ರೀಮಂಗಲ, ಮಾ.೯: ಪ್ರತಿ ತಿಂಗಳಿಗೊAದು ನೂತನ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಡವ ಸಾಹಿತ್ಯ ಲೋಕದಲ್ಲಿ ವಿಶೇಷ ಸಂಚಲನ ಸೃಷ್ಠಿಸಿದ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್’ಕಾರಡ ಕೂಟವು ತನ್ನ “ಜನಪ್ರಿಯ ಕೊಡವ ಸಾಹಿತ್ಯ ಮಾಲೆ” ಯೋಜನೆಯ ೨೦೦ನೇ ಪುಸ್ತಕವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಲೇಖಕರಿಂದ ವಿವಿಧ ಕೊಡವ ಲೇಖನಗಳನ್ನು ಆಹ್ವಾನಿಸಿದೆ.

೨೦೦ ವಿವಿಧ ಕೊಡವ ಲೇಖನಗಳುಳ್ಳ ‘ಕೊಡವ ತಕ್ಕ್ ಎಳ್ತ್’ಕಾರಡ ಕೂಟ’ದ ೨೦೦ ನೇ ಪುಸ್ತಕಕ್ಕೆ ಲೇಖಕರು ಇದುವರೆಗೆ ಎಲ್ಲೂ ಪ್ರಕಟವಾಗದ ತಮ್ಮ ಸ್ವ-ರಚನೆಯ ಕೊಡವ ಭಾಷೆಯ ೪ ಸಾಲು ಮೀರದ ಚುಟುಕು, ೧೦ ಸಾಲು ಮೀರದ ಕವನ, ೧,೦೦೦ ಶಬ್ಧ ಮೀರದ ಸಣ್ಣ ಕಥೆ, ಪ್ರಬಂಧ, ೫೦೦ ಶಬ್ಧ ಮೀರದ ವೈಚಾರಿಕ ಲೇಖನ, ಕೊಡವ ಕಿರು ನಾಟಕ, ಆರೋಗ್ಯ, ಶಿಕ್ಷಣ, ಆಯುರ್ವೇದ, ನಾಟಿ ಔಷಧ(ಮನೆ ಮದ್ದ್), ಪದ್ದತಿ, ಸಂಸ್ಕೃತಿ, ಹಬ್ಬಗಳ ಬಗೆಗಿನ ಲೇಖನ, ೨೦೦ ಶಬ್ಧ ಮೀರದ ಹಾಸ್ಯ ಲೇಖನ, ಪ್ರಕಟಣೆಗೆ ಯೋಗ್ಯವಾದ ವ್ಯಂಗ್ಯಚಿತ್ರ, ಗಾದೆ-ಜಾನಪದ ಸೇರಿದಂತೆ ವಿವಿಧ ಲೇಖನಗಳನ್ನು ತಾ. ೧೫ರೊಳಗೆ ಕಳುಹಿಸಬೇಕು.

ಲೇಖನಗಳನ್ನು: ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್’ಕಾರಡ ಕೂಟ, ಅ/o ಕರ್ನಾಟಕ ಒನ್ ಕಛೇರಿ, ಅತ್ರೇಯ ಆಸ್ಪತ್ರೆ ಎದುರು, ವೀರಾಜಪೇಟೆ ಇಲ್ಲಿಗೆ ತಲುಪಿಸಬೇಕು. ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ಬರೆಯಲು ಮುಕ್ತ ಅವಕಾಶವಿದ್ದು, ಭಾವನೆಗಳಿಗೆ ಧಕ್ಕೆಯಾಗದ ಪ್ರಕಟಣೆಗೆ ಯೋಗ್ಯವಾದ ಲೇಖನಗಳನ್ನು ‘ಕೂಟ’ದ ೨೦೦ನೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ೯೮೮೦೫೮೪೭೩೨ / ೯೪೪೮೩೨೬೦೧೪ / ೯೪೪೯೯೯೮೭೮೯ ಮೊಬೈಲ್ ನಂಬರನ್ನು ಸಂಪರ್ಕಿಸಬಹುದೆAದು ‘ಕೂಟ’ದ ಪ್ರಕಟಣೆ ತಿಳಿಸಿದೆ.