ಕರಿಕೆ, ಮಾ. ೧೧: ಪ್ರಪಂಚದ ವಿವಿಧೆಡೆ ಯುದ್ಧ ಭೀತಿ ಸೃಷ್ಟಿಯಾಗಿದ್ದು, ಭಾರತ ನಿರ್ಭೀತಿಯಿಂದ ಇರಲು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿದಿರುವುದು ಕಾರಣ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಲಕರ್ ಅಭಿಪ್ರಾಯಿಸಿದರು.
ಕರಿಕೆ ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಎಳ್ಳುಕೊಚ್ಚಿ ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಒಗ್ಗಟ್ಟಿನ ಕೊರತೆಯಿಂದಾಗಿ ದೇಶವನ್ನು ೬೦೦ ವರ್ಷಗಳ ಕಾಲ ಪರಕೀಯರು ಆಳ್ವಿಕೆ ನಡೆಸಿದರು. ದಬ್ಬಾಳಿಕೆಯಿಂದ ಮತಾಂತರ ನಡೆಸಿ ಇಲ್ಲಿನ ಸಂಪತ್ತನ್ನು ದೋಚಿ ಸಂಸ್ಕತಿಯನ್ನು ನಾಶಮಾಡಲು ಪ್ರಯತ್ನಿಸಿದರು. ಆದರೆ ಭವ್ಯ ಭಾರತ ಇಂದಿಗೂ ತನ್ನ ಸಂಸ್ಕೃತಿಗಳ ಪ್ರಭಾವವನ್ನು ಉಳಿಸಿಕೊಂಡಿದೆ. ಇದು ಹಿಂದೂ ಧರ್ಮಕ್ಕಿರುವ ಶಕ್ತಿಯಾಗಿದೆ. ಒಂದು ಮಗು ದಾರಿ ತಪ್ಪಿದರೆ ಒಂದು ಅಣುಬಾಂಬ್ ಸ್ಫೋಟಗೊಂಡAತೆ ಆದುದರಿಂದ ಬೆಳೆಯುವ ಮಕ್ಕಳಿಗೆ ಈಗಿನ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರದ ಅಗತ್ಯತೆ ಇದ್ದು ಪೋಷಕರು ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ದೇಶ-ಧರ್ಮ ಸಂರಕ್ಷಣೆಯತ್ತ ನಾವೆಲ್ಲ ಮುಂದಾಗಬೇಕೆAದು ಕರೆ ನೀಡಿದರು.
ರಾಷ್ಟç ಸೇವಿಕಾ ಸಮಿತಿಯ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ನಾಗರಾಜ್ ಭಟ್ ಮಾತನಾಡಿ, ಭಾಷೆ, ಧರ್ಮ, ಆಚಾರ ವಿಚಾರಗಳನ್ನು ಪ್ರೀತಿಸಿ ಇತರರನ್ನು ಗೌರವಿಸುವ ಏಕೈಕ ರಾಷ್ಟç ಭಾರತವಾಗಿದೆ. ದೇಶ ಬಲಿಷ್ಠ ರಾಷ್ಟçವಾಗಿ ಹೊರಹೊಮ್ಮಬೇಕಾದಲ್ಲಿ ನಾವೆಲ್ಲರೂ ಒಗ್ಗಟಿನಿಂದ ದೇಶಕಟ್ಟುವ ಕೆಲಸ ಮಾಡುವ ಅಗತ್ಯ ಎದ್ದು ಕಾಣುತ್ತಿದೆ. ಹಿಂದುತ್ವ ಎಂದರೆ ಯಾರಿಗೂ ತೊಂದರೆ ಕೊಡದೆ ಮಾತೃಭೂಮಿಯನ್ನು ಪ್ರೀತಿಸಿ ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹುಡುಗಿಯರು ಮತಾಂತÀರ, ಲವ್ ಜಿಹಾದಿನ ಬಲೆಗೆ ಸಿಲುಕಿ ಐಸಿಸ್‌ನಂತಹ ದೇಶದ್ರೋಹಿ ಉಗ್ರ ಸಂಘಟನೆಯಲ್ಲಿ ತರಬೇತಿ ಹೊಂದಿ ತನಿಖಾ ತಂಡಕೆ ಸಿಕ್ಕಿಬಿದ್ದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಈ ರೀತಿ ಮರುಕಳಿಸದಂತೆ ಎಚ್ಚರವಹಿಸಬೇಕೆಂದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನಡುಮುಟ್ಲು ಗಂಗಾಧಾರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟç ಸೇವಿಕಾ ಸಮಿತಿಯ ಸದಸ್ಯೆ ನಡುಮುಟ್ಲು ರೇವತಿ ದೇಶ ಭಕ್ತಿ ಗೀತೆ ಹಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಾದ ಸೋಣಂಗೇರಿ ಜಯಂತ್, ಕಂಡಿಗೆ ಪದ್ಮನಾಭ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಹಿಂದೂ ಅಯ್ಯಪ್ಪ ಭಜನಾ ಮಂದಿರದ ಆವರಣದಿಂದ ನಡೆದ ಶೋಭಾಯಾತ್ರೆ ಗಮನ ಸೆಳೆಯಿತು. ಜನರು ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪುಟಾಣಿ ಮಕ್ಕಳು ಭಾರತಾಂಬೆ, ಕಾವೇರಿ ಮಾತೆ, ರಾಣಿ ಅಬ್ಬಕ್ಕ ಸೇರಿದಂತೆ ಮಹನೀಯರ ವೇಷಗಳನ್ನು ತೊಟ್ಟು ಕಂಗೊಳಿಸಿದರು. ಕೊಲ್ಲಮೊಗರುವಿನ ಶ್ರೀದೇವಿ ಹಾಗೂ ಅಯ್ಯಪ್ಪ ಭಜನಾ ತಂಡದ ಭಜನೆ ಕುಣಿತ ಆಕರ್ಷಿಸಿತು.
- ಸುಧೀರ್ ಹೊದ್ದೆಟ್ಟಿ