ವೀರಾಜಪೇಟೆ, ಮಾ. ೧೧: ವೀರಾಜಪೇಟೆಯಲ್ಲಿ ಎಐಕೆಎಂಸಿಸಿ ಸಂಸ್ಥೆ ವತಿಯಿಂದ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮ ವೀರಾಜಪೇಟೆ ಕಂಚಿ ಕಾಮಾಕ್ಷಿ ರಸ್ತೆಯ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವೈದ್ಯರಾದ ಬಾದ್‌ಷ, ಎಂ.ಕೆ. ನೌಶಾದ್, ರಾಜಕ್ ಹಾಜಿ, ವಕೀಲರಾದ ದ್ರುವ, ಸಮಾಜ ಸೇವಕ ಸಂಜು ಸುಬ್ಬಯ್ಯ, ಚೋಪಿ ಜೋಸೆಫ್, ಸಾದಿಕ್, ಸಜಿರ್, ಬಷಿರ್ ಹಾಜಿ, ರಷೀದ್ ಹಾಜಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ವೀರಾಜಪೇಟೆ ನಗರದ ವಿವಿಧ ಜನಾಂಗದ ಸದಸ್ಯರು ಭಾಗವಹಿಸಿದ್ದರು.