ಮಡಿಕೇರಿ, ಮಾ. ೧೧: ಶ್ರೀಮಂಗಲ ವಿದ್ಯಾಸಂಸ್ಥೆಯ ಕುರಿತು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರದ ಕುರಿತು ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ತಾ. ೧೫ ರಂದು ತುರ್ತು ಮಹಾಸಭೆಯನ್ನು ಕರೆಯಲಾಗಿದೆ.
ಬೆಳಿಗ್ಗೆ ೧೦.೩೦ಕ್ಕೆ ಆಡಳಿತ ಮಂಡಳಿ ಅಧ್ಯಕ್ಷ ಬೋಡಂಗಡ ಎಂ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಹೊಸ ರೀತಿಯಲ್ಲಿ ನಾಡಿನ ಜನತೆಗೆ ಅನುಕೂಲವಾಗುವಂತಹ ಶೈಕ್ಷಣಿಕ ಸೇವೆ ಒದಗಿಸಲು ಬೆಂಗಳೂರು ಕೊಡವ ಸಮಾಜ ಆಸಕ್ತಿ ತೋರಿದೆ. ಪ್ರಸ್ತುತ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚಿಸಿ ಒಮ್ಮತದ ತೀರ್ಮಾನದೊಂದಿಗೆ ಮುಂದಿನ ವ್ಯವಸ್ಥೆಯನ್ನು ನಿರ್ಧರಿಸಲು ಈ ಸಭೆ ಏರ್ಪಡಿಸಲಾಗಿದ್ದು ಸದಸ್ಯರು, ಜನರು ಹಾಜರಾಗಿ ಸಲಹೆ, ಸೂಚನೆ ನೀಡುವಂತೆ ಆಡಳಿತ ಮಂಡಳಿ ಕೋರಿದೆ.