ಮಡಿಕೇರಿ, ಮಾ. ೧೨: ಜಿಲ್ಲೆಯಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತಿದ್ದು ಅರಣ್ಯ ಇಲಾಖೆ ಈ ಬಗ್ಗೆ ದಿವ್ಯ ಮೌನ ವಹಿಸಿದೆ. ಸರ್ಕಾರ ಕೂಡ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಪರಿಶಿಷ್ಟ ವರ್ಗದ ಜನ ಅರಣ್ಯದಂಚಿನಲ್ಲೆ ತಮ್ಮ ಇಡೀ ಜೀವನವನ್ನು ಕಳೆಯುತಿದ್ದರೂ ಸರ್ಕಾರ ಇವರ ಬಗ್ಗೆ ತಾತ್ಸಾರ ಭಾವನೆಯನ್ನು ಮುಂದುವರಿಸುವದರ ಮೂಲಕ ಇವರ ಮೂಲಭೂತ ಸೌಕರ್ಯಗಳಿಗೆ ಅಡ್ಡಿ ಪಡಿಸಿರುವುದನ್ನು ಖಂಡಿಸಿ ತಾ. ೧೩ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ನಗರದ ಅರಣ್ಯ ಕಚೇರಿ ಮುಂಭಾಗ ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ತಿಳಿಸಿದ್ದಾರೆ.