ಚೆಯ್ಯಂಡಾಣೆ, ಮಾ. ೧೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರೆದಿದೆ. ತೋಟಕ್ಕೆ ಲಗ್ಗೆಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ. ಚೇಲಾವರ ಗ್ರಾಮದ ಮುಂಡಿಯೊಳAಡ ಮಿಟ್ಟು ಅಪ್ಪಯ್ಯ ಹಾಗೂ ಮುಂಡಿಯ್ಯೋಳAಡ ಕುಟುಂಬಸ್ಥರ ತೋಟಕ್ಕೆ ಲಗ್ಗೆಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ ಹಾಗೂ ಮತ್ತಿತರ ಗಿಡಗಳನ್ನು ತುಳಿದು ನಾಶಪಡಿಸಿದ್ದು ನಷ್ಟ ಸಂಭವಿಸಿದೆ.

ಕಾಡಾನೆ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ರೈತರು ಜೀವ ಭಯದಲ್ಲೇ ತೋಟಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಕಾಡಾನೆ ಈ ವ್ಯಾಪ್ತಿಯ ರೈತರ ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸಿದೆ, ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಕಾಡಾನೆ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಹಾಗೂ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.