ನಾಪೋಕ್ಲು, ಮಾ. ೧೨: ಗೌಡ ಮಹಿಳಾ ಒಕ್ಕೂಟ ಮೂರ್ನಾಡು ವತಿಯಿಂದ ತಾ. ೧೫ ರಂದು ಮಹಿಳಾ ದಿನಾಚರಣೆ ಹಾಗೂ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮೂರ್ನಾಡು ಪ್ರಕೃತಿ ಕಾಂಪ್ಲೆಕ್ಸ್ನಲ್ಲಿ ಮಹಿಳಾ ದಿನಾಚರಣೆ ಹಾಗೂ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ ೯.೩೦ ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೯.೩೦ ಗಂಟೆಗೆ ಮನರಂಜನಾ ಕ್ರೀಡೆಗಳು ನಡೆಯಲಿದೆ. ೧೦.೩೦ ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಮಹಿಳಾ ಒಕ್ಕೂಟ ಮೂರ್ನಾಡು ಇದÀರ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಚಿಂತು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಹಾಕತ್ತೂರು ಶಾಲೆಯ ಮುಖ್ಯ ಶಿಕ್ಷಕರಾದ ತೆಕ್ಕಡೆ ಕುಮಾರಸ್ವಾಮಿ ಉದ್ಘಾಟಿಸುವರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕವಿ ಹಾಗೂ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ನೆರವೇರಿಸಲಿದ್ದಾರೆ. ಇದೇ ಸಂದರ್ಭ ಮಹಿಳೆಯರಿಗಾಗಿ ವಿಶೇಷ ಸೀರೆ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರಾದ ಕಟ್ಟೆಮನೆ ಪ್ರೇಮ ಗಣೇಶ್ ಉದ್ಘಾಟಿಸಲಿದ್ದಾರೆ.