ನಾಪೋಕ್ಲು, ಮಾ. ೧೨: ಮಹಿಳೆಯರಿಗೆ ಪೂಜನೀಯ ಸ್ಥಾನವಿದ್ದು ಹಲವಾರು ಆಚಾರ-ವಿಚಾರಗಳನ್ನು ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲೆ ಆನೇರ ಜಾನಕಿ ಹೇಳಿದರು.
ಗೌಡ ಮಹಿಳಾ ಒಕ್ಕೂಟ ಕೊಡಗು, ಮಡಿಕೇರಿ ಮತ್ತು ಶ್ರೀ ಕಾವೇರಿ ಗೌಡ ಮಹಿಳಾ ಘಟಕ ಭಾಗಮಂಡಲ ಇವರ ಸಹಯೋಗದಲ್ಲಿ ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘದ ಹೊಸೂರು ಜೋಯಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಆಮೆ ದಮಯಂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಕೈಬಿಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯೂ ಎಚ್ಚೆತ್ತುಕೊಳ್ಳಬೇಕು ಎಂದರು.
೨೦೨೫ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪಡೆದ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಸನ್ಮಾನ ಸ್ವೀಕರಿಸಿ ತಮ್ಮ ಸಂದೇಶದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಪುರುಷರ ಸಹಕಾರದ ಅಗತ್ಯತೆ ಇದೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಅವರು ಮಹಿಳೆ ಅಡುಗೆ ಮನೆಯಿಂದ ಹೊರಬಂದು ಧೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.
ಕರಿಕೆ ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ಕುದುಪಜೆ ಸುಗಿತಾ ಅವರು ಮಕ್ಕಳು ಜೀವನದಲ್ಲಿ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕಾದ ಅಗತ್ಯದ ಬಗ್ಗೆ ತಿಳಿಸಿದರು.
ಭಾಗಮಂಡಲದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಕ್ರೀಡೋತ್ಸವವನ್ನು ಕೊಡಗು ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಳಿಯಪ್ಪ ಉದ್ಘಾಟಿಸಿದರು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಓಟ, ನಡಿಗೆ, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗಮಂಡಲದ ಶ್ರೀ ಕಾವೇರಿ ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ ಸೂರ್ತಲೆ ವಹಿಸಿದ್ದರು. ವೇದಿಕೆಯಲ್ಲಿ ಭಾಗಮಂಡಲದ ಶ್ರೀ ಕಾವೇರಿ ಮಹಿಳಾ ಘಟಕದ ಗೌರವಾಧ್ಯಕ್ಷೆ ಇಂದಿರಾ ಕುದಕುಳಿ, ಸಾಹಿತಿ ಪೂಜಾರಿರ ಕೃಪಾ ದೇವರಾಜ್, ಭಾಗಮಂಡಲದ ಆರಕ್ಷಕ ಸಿಬ್ಬಂದಿ ಶೋಭಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಹಾಗೂ ರಾಷ್ಟç / ರಾಜ್ಯಮಟ್ಟದ ಹಾಕಿ ಆಟಗಾರ್ತಿಯರಾದ ಸೂರ್ತಲೆ ಬೃಂದಾ ಕಾಶಿ, ನಿತ್ಯಮಲೆ ದಿಶಾ ದಿನೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ದೇವರನಾಮ, ಜನಪದ ಗೀತೆ, ಆಶಯಗೀತೆ ಹಾಗೂ ಸೋಬಾನೆ ಹಾಡುಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಲಾಯಿತು. ಬಾರಿಕೆ ಶೈಲಜಾ ತಂಡದವರು ಪ್ರಾರ್ಥಿಸಿದರು. ಕೇಕಡ ಇಂದುಮತಿ ಸ್ವಾಗತಿಸಿ, ದೇಲಂಪಾಡಿ ರಮ್ಯಾ, ಬಾರಿಕೆ ಶೈಲಜಾ ಹಾಗೂ ಕಡ್ಲೇರ ಆಶಾಲತಾ ಅವರು ಸನ್ಮಾನಿತರನ್ನು ಪರಿಚಯಿಸಿದರು. ಕೋಳಿಬೈಲು ಮಾಲತಿ ಕಾರ್ಯಕ್ರಮ ನಿರೂಪಿಸಿ, ಅಮೆ ದಮಯಂತಿ ವಂದಿಸಿದರು. ಗೌಡ ಮಹಿಳಾ ಒಕ್ಕೂಟದ ಹಾಗೂ ಶ್ರೀ ಕಾವೇರಿ ಗೌಡ ಮಹಿಳಾ ಘಟಕದ ನಿರ್ದೇಶಕರು, ಸದಸ್ಯರು ಹಾಗೂ ಜನಾಂಗ ಬಾಂಧವರು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು.