ಶ್ರೀಮಂಗಲ, ಮಾ. ೧೨: ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ನಡೆಸಿ, ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವರು ಈ ಸಂದರ್ಭ ಮಾತನಾಡಿ, ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಇಟ್ಟುಕೊಳ್ಳಬೇಕು ಹಾಗೂ ಸದಾ ಆಶಾವಾದಿಗಳಾಗಿರಬೇಕು ಹಾಗಾದರೆ ಮಾತ್ರ ನಾವು ಸಂತೋಷದಲ್ಲಿರಲು ಸಾಧ್ಯ ಎಂದು ಹೇಳಿದರು. ಜೀವನದಲ್ಲಿ ಕಷ್ಟ - ಸುಖ ಸಹಜ. ಹಿರಿಯರು ಒಂದು ಶಾಂತ ಜಾಗದ ಆಶ್ರಮದಲ್ಲಿ ನೆಲೆಸಿರುವುದು ಹಾಗೂ ಇದನ್ನು ಸ್ಥಾಪನೆ ಮಾಡಿದವರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಕೂಟದ ಗೌರವ ಕಾರ್ಯದರ್ಶಿ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಅವರು ಪ್ರಬಂಧ "ನಂಗಡ ಮಂಡೆಕ್ ನಂಗಡ ಕೈ" ಎಂಬ ವಿಷಯದಲ್ಲಿ ಪ್ರಬಂಧ ಮಂಡನೆಯನ್ನು ಮಾಡಿದರು. ಆಶ್ರಮದ ಹಿರಿಯರು ಮತ್ತು ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಮತ್ತು ಸದಸ್ಯರು ನಡುವೆ ಆರೋಗ್ಯಯುತ ವಾದ, ಮಾತು, ಚರ್ಚೆ ನಡೆಯಿತು. ಈ ಸಂದರ್ಭ ಹಿರಿಯ ನಾಗರಿಕ ಆಶ್ರಮ ವಾಸಿಗಳು ಇಂತಹ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ, ಆಶ್ರಮ ವಾಸಿಗಳಿಗೆ ಹೊರಗಿನವರ ಸಂಪರ್ಕ ಈ ಮೂಲಕ ದೊರತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಕಸ್ತೂರಿ ಸೋಮಯ್ಯ ಸ್ವಾಗತಿಸಿ, ಮೂಕಳೆರ ಕಾವ್ಯ ಮಧು ವಂದಿಸಿದರು. ಈ ಸಂದರ್ಭ ಕೂಟದ ಜಂಟಿ ಕಾರ್ಯದರ್ಶಿ ಮೂಕಳೆರ ಆಶಾ ಪೂಣಚ್ಚ, ಮಾಣಿಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್, ಕಾಳಿಮಾಡ ಲತಾ ಮೋಟಯ್ಯ, ಮಂಡೆಚAಡ ಬೇಬಿ, ಪ್ರೊ. ಇಟ್ಟಿರ ಬಿದ್ದಪ್ಪ ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.