ಮಡಿಕೇರಿ, ಮಾ. ೧೨: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ. ೧೪ ರಂದು ನಡೆಯಲಿದೆ. ಬೆಳಗ್ಗಿನ ಜಾವ ತಕ್ಕಮುಖ್ಯಸ್ಥರ ಮನೆಯಿಂದ ಭಂಡಾರ, ಕುಯ್ಯ ಬನಕ್ಕೆ ಬಂದು ಬಾಳೆಹಿಟ್ಟು, ತೆಂಗಿನಕಾಯಿ ನೈವೇದ್ಯ ಸಮರ್ಪಣೆಯಾಗುತ್ತದೆ. ಮಧ್ಯಾಹ್ನ ೧೨ ಗಂಟೆಗೆ ೪ ಕೇರಿಗಳಿಂದ ಎತ್ತುಪೋರಾಟ ಸಹಿತ ಊರಿನವರು, ಭಕ್ತಾದಿಗಳು ಬನದಲ್ಲಿ ಸೇರಿ ಭಂಡಾರ ಹರಕೆ ಒಪ್ಪಿಸುವ ಕಾರ್ಯ ಮುಗಿಯುತ್ತಿದ್ದಂತೆ ತೆಂಗಿನಕಾಯಿ ಒಡೆದು ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. ಸಾವಿರಾರು ಲೆಕ್ಕದಲ್ಲಿ ತೆಂಗಿನಕಾಯಿಯ ಸೇವೆಯನ್ನು ಭಕ್ತರು ಕೈಗೊಳ್ಳುತ್ತಾರೆ. ಇತ್ತೀಚೆಗೆ ದೇವಿಯ ಬನದ ಸಂರಕ್ಷಣೆ ನಿಮಿತ್ತ ಬೇಲಿ ಹಾಕಿಸಲು ತಂತ್ರಿ ಮೂಲಕ ತಾಂಬೂಲ ಪ್ರಶ್ನೆ ಕೇಳಿದಾಗ ತೆಂಗಿನಕಾಯಿ ಸಮರ್ಪಣೆಯನ್ನು ಬಹಳ ಶುದ್ಧ ಮುದ್ರಿಕೆಯಿಂದ ಒಪ್ಪಿಸುವಂತಾದರೆ ದೇವಿಗೆ ತೃಪ್ತಿಯಾಗುವುದಾಗಿ ಕಂಡುಬAದದ್ದರಿAದ ಭಕ್ತರು ತೆಂಗಿನಕಾಯಿ ಜುಟ್ಟು ಹಾಗೂ ನಾರನ್ನು ಸ್ವಚ್ಛ ಮಾಡಿ ನವಿರಾಗಿ ಹರಸಿನ ಲೇಪಿಸಿ ನೈವೇದ್ಯಕ್ಕೆ ನೀಡಿದಲ್ಲಿ ಒಳಿತು ಎಂಬುದಾಗಿ ತಿಳಿದುಬಂದಿದೆ. ಆದುದರಿಂದ ಭಕ್ತರು ಈ ವಿಚಾರದಲ್ಲಿ ಗಮನ ಹರಿಸಬೇಕಿದೆ. ವರ್ಷಕ್ಕೊಮ್ಮೆ ಆಚರಿಸಲ್ಪಡುವ ಈ ಉತ್ಸವಕ್ಕೆ ತೆಂಗಿನ ಎಣ್ಣೆ ಮಾತ್ರ ಉಪಯೋಗಿಸಲ್ಪಡುವುದಲ್ಲದೆ ಹೂ, ಕರ್ಪೂರ, ಊದುಬತ್ತಿಯ ಬಳಕೆ ನಿಷಿದ್ಧವಾಗಿರುತ್ತದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಯೂನಿಯನ್ ಸಂಘದ ಅಧ್ಯಕ್ಷ, ಆಡಳಿತ ಮಂಡಳಿಯವರು ತಿಳಿಸಿದ್ದಾರೆ