ವೀರಾಜಪೇಟೆ, ಮಾ. ೧೨: ವೀರಾಜಪೇಟೆ ನಗರ ಸೇರಿದಂತೆ ನಾಲ್ಕು ಗ್ರಾಮಗಳ ಮಹಾದೇವ ಎನಿಸಿಕೊಂಡಿರುವ ಕಳಶಪ್ರಾಯದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇಗುಲದ ವಾರ್ಷಿಕೋತ್ಸವ ತಾ. ೧೫ ರಿಂದ ೨೦ ರವರೆಗೆ ಜರುಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ತಾ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ಅಪರಾಹ್ನ ೪ ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವುದು, ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ತಾ. ೧೬ ರಂದು ಪ್ರಾಥ:ಕಾಲ ೫ ಗಂಟೆಗೆ ಇರ್ ಬೊಳಕ್, ಹಗಲು ೧೧ ಗಂಟೆಗೆ ನಾಗನ ಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ರಾತ್ರಿ ೮ ಗಂಟೆಗೆ ಕಾಪು, ಮಾಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ತಾ. ೧೭ ರಂದು ಪ್ರಾಥ:ಕಾಲ ೫ ಗಂಟೆಗೆ ಇರ್ ಬೊಳಕ್, ಹಗಲು ೧೧ ಗಂಟೆಗೆ ಅಯ್ಯಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ಅನ್ನಸಂತರ್ಪಣೆ, ರಾತ್ರಿ ೮ ಇರ್ ಬೊಳಕ್ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೧೮ ರಂದು ಪ್ರಾಥ:ಕಾಲ ೫ ಗಂಟೆಗೆ ಇರ್ ಬೊಳಕ್, ಮಧ್ಯಾಹ್ನ ೧೨ ಗಂಟೆಗೆ ನೆರ್‌ಪು, ಬಲ್ಯನಮ್ಮೆ, ಎತ್ತ್ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಅಪರಾಹ್ನ ೧ ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಅಪರಾಹ್ನ ೩ ಗಂಟೆಗೆ ದೇವರು ಹೊರಗೆ ಬರುವುದು, ಉತ್ಸವ ಪ್ರಮುಖ ದಿನದ ಅಂಗವಾಗಿ ಸಂಜೆ ೬ ಗಂಟೆಗೆ ಪೇಟೆ ಮೆರವಣಿಗೆ ನಡೆಯಲಿದೆ. ತಾ. ೧೯ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಅಪರಾಹ್ನ ೪ ಗಂಟೆಗೆ ಬಸವನಕಟ್ಟೆಯಲ್ಲಿ ವಿಶೇಷಪೂಜೆ ನಡೆಯಲಿದೆ. ಬಳಿಕ ಸಂಜೆ ೬ ಗಂಟೆಗೆ ದೇವರ ಜಳಕ ಅವಭೃತ ಸ್ನಾನ, ರಾತ್ರಿ ೮ ಗಂಟೆಗೆ ದೇವರ ಪ್ರದಕ್ಷಿಣೆ ನೃತ್ಯ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ತಾ. ೨೦ ರಂದು ಹಗಲು ಕೊಡಿಮರ ಇಳಿಸುವುದು. (ಕಳಮಡಕ್ಕುವೊ) ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಮಲೆ ಮಹದೇಶ್ವರ ದೇವಾಲಯದ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.