ವೀರಾಜಪೇಟೆ, ಮಾ. ೧೨: ವೀರಾಜಪೇಟೆಯ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ತಾ. ೧೫ ರಿಂದ ೨೦ ರವರೆಗೆ ನಡೆಯಲಿದೆ. ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಭಾಗಗಳಿಗೆ ಸೇರಿದ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಇದಾಗಿದ್ದು ತಾ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮದೊಂದಿಗೆ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ.
ಸಂಜೆ ೪ ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವುದು, ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ೮ ಗಂಟೆಗೆ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ತಾ. ೧೬ ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು, ಹಗಲು ೧೧ ಗಂಟೆಗೆ ನಾಗನ ಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ರಾತ್ರಿ ೮ ಗಂಟೆಗೆ ಕಾಪು, ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ತಾ. ೧೭ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು ನಡೆಯಲಿದ್ದು, ೧೧ ಗಂಟೆಗೆ ಅಯ್ಯಪ್ಪನ ಸ್ಥಾನದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ೮ ಗಂಟೆಗೆ ಇರುಬೆಳಕು, ಮಹಾಪೂಜೆ ಅನ್ನ ಸಂತರ್ಪಣೆ. ತಾ. ೧೮ ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು, ಮಧ್ಯಾಹ್ನ ೧೨ ಗಂಟೆಗೆ ದೊಡ್ಡ ಹಬ್ಬ, ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೧ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ೩ ಗಂಟೆಗೆ ದೇವರು ಹೊರಗೆ ಬರುವುದು, ಸಂಜೆ ೬ ಗಂಟೆಗೆ ಪೇಟೆ ಮೆರವಣಿಗೆ ನಡೆಯಲಿದೆ.
ತಾ. ೧೯ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ, ಬಸವನ ಕಟ್ಟೆಯಲ್ಲಿ ಪೂಜೆ, ಸಂಜೆ ೬ ಗಂಟೆಗೆ ದೇವರ ಜಳಕ, ಅವಭೃತ ಸ್ನಾನ, ರಾತ್ರಿ ೮ ಗಂಟೆಗೆ ದೇವರ ಪ್ರದಕ್ಷಿಣೆ ನೃತ್ಯ ನಡೆಯಲಿದೆ. ತಾ. ೨೦ ರಂದು ಹಗಲು ೧೧ ಗಂಟೆಗೆ ಕೊಡಿಮರ ಇಳಿಸುವುದು ೧೨ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ.