ವೀರಾಜಪೇಟೆ, ಮಾ. ೧೨: ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನ ಇವರ ವತಿಯಿಂದ ೮೨ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ತಾ. ೧೭ ರಿಂದ ೧೯ ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ತಾ. ೧೭ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ೮:೪೫ ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ ೫ ಗಂಟೆಗೆ ಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ೬ ಗಂಟೆಗೆ ನೂತನವಾಗಿ ನಿರ್ಮಿಸಿದ ಭಜನಾ ಮಂದಿರದ ಉದ್ಘಾಟನೆ ನೆರವೇರಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ.

ಮಾ. ೧೮ ರಂದು ಬುಧವಾರ ಮಧ್ಯಾಹ್ನ ೨ ಗಂಟೆಗೆ ದೇವರ ಮಲೆ ಇಳಿಸುವುದು, ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ಸಂಜೆ ೫:೩೦ ಗಂಟೆಗೆ ಮೊದಕಲಶದೊಂದಿಗೆ ತಾಲಪೋಲಿ ಮೆರವಣಿಗೆ, ಕಾಳಿಂಗ ಕಲಾ ಸಮಿತಿಯವರ ಸಿಂಗಾರಿ ಮೇಳ ಹಾಗೂ ತತ್ವಮಸಿ ಸಹಸ್ರ ವೆಳಕಾಟ್ಟಂ ಚಂಡೆಮೇಳದೊAದಿಗೆ, ಮಹಿಳೆಯರ ತಾಲಪ್ಪೊಲಿ ಮೆರವಣಿಗೆಯು ತೆಲುಗರ ಬೀದಿಯಿಂದ ಹೊರಟು, ಮುಖ್ಯ ಬೀದಿಗಾಗಿ ೮ ಗಂಟೆಗೆ ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ ತಲುಪಲಿದೆ.

ಸಂಜೆ ೬ ಗಂಟೆಯಿAದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಲಿದ್ದಾರೆ ರಾತ್ರಿ ೮ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಮಾ.೧೯ ರಂದು ಗುರುವಾರ ಪ್ರಾತಃಕಾಲ ೧ ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ೪ ಗಂಟೆಗೆ ತಿರುವಪ್ಪನ್, ಬೆಳಿಗ್ಗೆ ೮ ಗಂಟೆಗೆ ಭಗವತಿ(ಪೋದಿ), ೧೦ ಗಂಟೆಗೆ ವಸೂರಿಮಾಲ, ೧೧ ಗಂಟೆಗೆ ವಿಷ್ಣುಮೂರ್ತಿ, ೧೨ ಗಂಟೆಗೆ ಅನ್ನ ಸಂತರ್ಪಣೆ ಅಪರಾಹ್ನ ೩ ಗಂಟೆಗೆ ವಿಷ್ಣುಮೂರ್ತಿ ವಾರಣದೊಂದಿಗೆ ೨೦೨೬ ನೇ ಸಾಲಿನ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.