ಮಡಿಕೇರಿ, ಮಾ. ೧೨: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ೧೦ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು.
ಎಂ.ಎ. ಶೈಲ ದೇವಸ್ತೂರು ಕಾರ್ಯಕರ್ತೆ, ಎನ್. ವೀಣಾ ಕುಮಾರಿ ಕಗ್ಗೋಡ್ಲು ಕಾರ್ಯಕರ್ತೆ ಆರ್. ಗೀತಾ ರಾಘವೇಂದ್ರ ದೇವಸ್ಥಾನ ಕಾರ್ಯಕರ್ತೆ, ಎಸ್.ಬಿ. ಶೋಭಾ ಚೆರಂಗಾಲ ಕಾರ್ಯಕರ್ತೆ, ಬಿ.ಎ. ಹರಿಣಾಕ್ಷಿ ಕಟ್ಟೆಮಾಡು ಕಾರ್ಯಕರ್ತೆ, ತುಳಸಿ ಅಚ್ಚಯ್ಯ ಪರಂಬುಬಾಣೆ ಕಾರ್ಯಕರ್ತೆ, ಎನ್.ಎ. ಆಶಾ ಬೇತು ಕಾರ್ಯಕರ್ತೆ, ಯು.ಎನ್. ಸುಜಾತ ಅಜ್ಜಿಮುಟ್ಟ ಕಾರ್ಯಕರ್ತೆ, ಎಸ್. ಸತ್ಯವತಿ ಚಡಾವು ಅಂಗನವಾಡಿ ಕಾರ್ಯಕರ್ತೆ, ಎಂ.ಡಿ. ರೇಖಾ ಪನ್ನೇಡ್ಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ೫ ಅಂಗನವಾಡಿ ಸಹಾಯಕಿಯರಾದ ಪಿ.ಬಿ. ಸುಮಿತ್ರ ಹೊಸ್ಕೇರಿ ಬೆಟ್ಟ ಸಹಾಯಕಿ, ಎಸ್.ಬಿ. ರಾಣಿ ಅಶೋಕ್ಪುರ ಸಹಾಯಕಿ, ಬಿ.ಎಂ. ಹೇಮಲತಾ ಕಡಗದಾಳು ಸಹಾಯಕಿ, ಕೆ.ಡಿ. ಪ್ರವೀಣ ಕುಮಾರಿ ದೇವಾಲಯ ಸಹಾಯಕಿ, ಕೆ.ಯು. ಅಬ್ಸತ್ ಎಡಪಾಲ ಸಹಾಯಕಿ, ಇವರಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಘಟಕದ ವತಿಯಿಂದ ಗೌರವ ಸನ್ಮಾನ ನೆರವೇರಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು ೨೦ಕ್ಕೂ ಅಧಿಕ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಭಾಗಮಂಡಲ, ಚೇರಂಬಾಣೆ, ಮರಗೋಡು ಮೂರ್ನಾಡು, ಚೈಯಂಡಾಣೆ, ಸಂಪಾಜೆ, ಪೆರಾಜೆ, ನಾಪೋಕ್ಲು, ಬಲ್ಲಮಾವಟಿ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನೃತ್ಯ, ಹಾಡು, ನಾಟಕಗಳ ಪ್ರದರ್ಶನ ಮಾಡಿ ೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರ ಮನಸೆಳೆದರು. ನಂತರ ಆರೋಗ್ಯ, ಯೋಗ, ಕಾನೂನು ಮತ್ತು ಮಹಿಳೆಯರ ಕುರಿತು, ಅಕ್ಕಪಡೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವು ನೆರವೇರಿತು. ಕಾರ್ಯಕ್ರಮದ ಯಶಸ್ವಿಗೆ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ಪ್ರಧಾನ ಕಾರ್ಯದರ್ಶಿ ಎಂ. ಧನಂಜಯ್, ಉಪಾಧ್ಯಕ್ಷರು ಅನಿಲ್ ಎಚ್.ಟಿ., ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕರಾದ ಕೆ.ಟಿ. ಉತ್ತಯ್ಯ, ವಿಕ್ರಂ ಶೆಟ್ಟಿ, ಕೆ.ಸಿ. ವಸಂತ್, ಲೋಕೇಶ್ ಡಿ.ವಿ., ಮಧುಕರ್ ಶೇಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಮೇಲ್ವಿಚಾರಕರು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್, ಶೀಲಾ ಅಶೋಕ್ ಶ್ರಮಿಸಿದರು.