ಮಡಿಕೇರಿ, ಮಾ. ೧೭: ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘ, ತಾಳತ್ತಮನೆಯ ಅಂಬಾ ಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಸಂಯುಕ್ತಾಶ್ರಯದಲ್ಲಿ ತಾ. ೨೧ ಮತ್ತು ೨೨ ರಂದು ೯ನೇ ವರ್ಷದ ಕ್ರೀಡಾಕೂಟ ಹಾಗೂ ಎಂಪಿಎಲ್ ಸೀಸನ್ ೨ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೨೧ ರಂದು ಬೆಳಿಗ್ಗೆ ೮ ಗಂಟೆಗೆ ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಕ್ರೀಡಾಕೂಟವನ್ನು ಕಟ್ಟಡ ಸಮಿತಿ ಕಾರ್ಯದರ್ಶಿ ಯೋಗೇಂದ್ರ ಎಂ.ಎಸ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA. ಪರಮೇಶ್ವರ, ಅತಿಥಿಗಳಾಗಿ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್ ನಾಯ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆ ರತ್ನಮಂಜರಿ ನರಸಿಂಹ ಮತ್ತಿತರರು ಉಪಸ್ಥಿತರಿರುವರು.

ತಾ. ೨೨ ರಂದು ಮಧ್ಯಾಹ್ನ ೩.೩೦ ಗಂಟೆಗೆ ನಡೆಯುವ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಚೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA. ಪರಮೇಶ್ವರ, ಉಪಾಧ್ಯಕ್ಷೆ ದೇವಕಿ ಜಿ.ಆರ್ ನಾಯ್ಕ, ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಟಿ. ಗುರುವಪ್ಪ, ಮಹಿಳಾ ವೇದಿಕೆಯ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಎರಡನೇ ಮೊಣ್ಣಂಗೇರಿ ಉಪ ಸಮಿತಿಯ ಅಧ್ಯಕ್ಷ ವೆಂಕಪ್ಪ ಎಂ.ಎಸ್, ಕಾನೂರು ಉಪ ಸಮಿತಿಯ ಅಧ್ಯಕ್ಷ ನಿರಾಳ್ ಎಂ.ಎ, ಕುಂಡಾಡು ಉಪ ಸಮಿತಿಯ ಅಧ್ಯಕ್ಷ ಧನಂಜಯ, ಕರಿಕೆ ಉಪ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೆ.ಜಿ ಹಾಗೂ ಕುದ್ರೆಪಾಯ ಉಪ ಸಮಿತಿಯ ಅಧ್ಯಕ್ಷ ಶಶಿಕಾಂತ್ ಕೆ.ಜಿ ಪಾಲ್ಗೊಳ್ಳಲಿದ್ದಾರೆ.

೯ನೇ ವರ್ಷದ ಕ್ರೀಡಾಕೂಟ ಹಾಗೂ ಎಂಪಿಎಲ್ ಸೀಸನ್ ೨ ಕ್ರಿಕೆಟ್ ಪಂದ್ಯಾವಳಿಯ ಲೋಗೋ ಮತ್ತು ಟ್ರೋಫಿಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಂಬಾ ಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಸಂತೋಷ್ ಎಂ.ಕೆ, ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಎಂ.ಎA ಮತ್ತಿತರರು ಉಪಸ್ಥಿತರಿದ್ದರು.

ತಾ. ೨೨ ರಂದು ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ೧೦೦ ಮೀಟರ್ ಓಟ, ಮಹಿಳೆಯರಿಗಾಗಿ ಥ್ರೋಬಾಲ್, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ನಿಂಬೆ ಚಮಚ ಓಟ, ಸೂಜಿ ನೂಲು ಓಟ, ೧೦೦ ಮೀಟರ್ ಓಟ, ಸಂಗೀತ ಖುರ್ಚಿ, ಬಾಲಕಿಯರಿಗೆ ನಿಂಬೆ ಚಮಚ ಓಟ, ಸೂಜಿ ನೂಲು ಓಟ, ೫೦ ಮೀಟರ್ ಓಟ, ೧೦೦ ಮೀಟರ್ ಓಟ, ೧೦ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಕಪ್ಪೆ ಜಿಗಿತ ಓಟ ೫೦ ಮೀಟರ್, ೫ ವರ್ಷದೊಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು, ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ಬಕೆಟ್‌ಗೆ ಚೆಂಡು ಹಾಕುವುದು, ೫೦ ವರ್ಷ ಮೇಲಿನ ಪುರುಷ ಮತ್ತು ಮಹಿಳೆಯರಿಗಾಗಿ ೧೦೦ ಮೀಟರ್ ನಡಿಗೆ ಸ್ಪರ್ಧೆ ನಡೆಯಲಿದೆ. ಆಸಕ್ತರು ೭೦೯೦೩೨೭೬೮೪ ಮತ್ತು ೯೪೪೯೮೫೫೩೪೫ ನ್ನು ಸಂಪರ್ಕಿಸಬಹುದು.