ಮಡಿಕೇರಿ, ಮಾ. ೧೭: ಬಿಳಿಗೇರಿ ಮತ್ತು ಕಗ್ಗೋಡ್ಲು ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಕುರಿತು ಅಂಗಡಿ, ಹೊಟೇಲ್‌ಗಳಿಗೆ ದಾಳಿ ಮಾಡಿದಾಗ ಸೆಕ್ಷನ್ ೪ ರ ಅಡಿಯಲ್ಲಿ ೧೦ ಪ್ರಕರಣಗಳಿಗೆ ರೂ.೧೮೦೦ ಗಳ ದಂಡವನ್ನು ವಿಧಿಸಿ ನಿಯಮಗಳ ಕುರಿತು ಆರೋಗ್ಯ ಶಿಕ್ಷಣ ನೀಡಲಾಯಿತು.

ಸಂಗ್ರಹಣೆಯಾದ ದಂಡ ವನ್ನು ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಹಾಗೂ ಜಿಲ್ಲಾ ತಂಬಾಕು ಕೋಶದ ಮಂಜುನಾಥ್ ಹಾಗೂ ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು.