ವೀರಾಜಪೇಟೆ, ಮಾ. ೧೭: ಪಂಜಾಬ್ನ ಭಟಿಂಡಾದ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ೪೫ ನೇ ವೆಟರ್ನ್ ರಾಷ್ಟಿçÃಯ ಮಾಸ್ಟರ್ಸ್ ಅಥ್ಲೆಟಿಕ್ನಲ್ಲಿ ೭೦ ವರ್ಷ ಮೇಲ್ಪಟ್ಟವರ ವಿಭಾಗದ ಚಾಂಪಿಯನ್ಶಿಪ್ನಲ್ಲಿ ಮುಳ್ಳೇರ ಪೊನ್ನಮ್ಮ ಪೂವಣ್ಣ ಭಾಗವಹಿಸಿ ೧೦೦ ಮೀಟರ್ ಓಟ, ಶಾಟ್ಪುಟ್ ಮತ್ತು ಜಾವೆಲಿನ್ ಎಸೆತಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಮೂರು ಚಿನ್ನದ ಪದಕ ಪಡೆದಿದ್ದಾರೆ.
ಮುಂದೆ ನಡೆಯಲಿರುವ ಅಂತರರಾಷ್ಟಿçÃಯ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ಇವರು ಮೂಲತಃ ವೀರಾಜಪೇಟೆ ತಾಲೂಕಿನ ಮುಳ್ಳೇರ ಪೂವಣ್ಣ ಅವರ ಪತ್ನಿಯಾಗಿದ್ದು, ಬೆಳಗಾವಿಯ ಸೈನಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.